ನವದೆಹಲಿ,ಮೇ.7(DaijiworldNews/AZM):ಮಾಲೆಗಾಂ ಸ್ಪೋಟದಲ್ಲಿ ಆರೋಪಿ ಪ್ರಗ್ಯಾ ಸಿಂಗ್ ಚುನಾವಣೆಗೆ ಸ್ಪರ್ಧಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಪ್ರತಿಕ್ರಯಿಸಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಸ್ವರಾ, " ನಾನು ಈಗಾಗಲೇ ಆಕೆ ಸ್ಪರ್ಧೆಯ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇನೆ. ಆಕೆಯ ಸ್ಪರ್ಧೆ ನಾಚಿಕೆಗೇಡಿನ ಸಂಗತಿ. ಒಂದು ವೇಳೆ ನೀವು ಭೂಪಾಲ್ ನಲ್ಲಿ ಯಾರು ಉತ್ತಮ ಅಭ್ಯರ್ಥಿ ಎಂದು ಕೇಳಿದರೆ ಅದು ನಿಶ್ಚಿತವಾಗಿ ದಿಗ್ವಿಜಯ ಸಿಂಗ್" ಎಂದರು. ಪ್ರಗ್ಯಾ ಹಿಂದೂ ಎಂದು ಹೇಳಿಕೊಂಡರೆ ಆಕೆ ಭಯೋತ್ಪಾದನೆಯ ಆರೋಪವನ್ನು ಹೊತ್ತಿದ್ದಾಳೆ, ಆದ್ದರಿಂದ ಆಕೆ ಹಿಂದೂ ಭಯೋತ್ಪಾದನೆ ಆರೋಪಿ ಎಂದು ತಿಳಿಸಿದ್ದಾರೆ.
ಇನ್ನು ಭಯೋತ್ಪಾದನೆ ಅನ್ನುವುದು ಪಾಪದ ಸಂಗತಿ. ಹಾಗಾಗಿ ಭಯೋತ್ಪಾಧನೆಗೆ ಧರ್ಮವಿಲ್ಲ. ಅದನ್ನು ಯಾವ ಧರ್ಮದವರು ಮಾಡಿದರೂ ಅದು ಹಿಂಸೆ ಅಪರಾಧ ಎಂದು ಹೇಳಿದರು.