ನವದೆಹಲಿ,ಮೇ.7(DaijiworldNews/AZM):ಬ್ಯಾಂಕಿಗೆ ನೇರವಾಗಿ ಹೋಗಿ ಮಾಡಬೇಕಾದ ಕೆಲಸಗಳನ್ನು ಇನ್ಮುಂದೆ ಎಟಿಎಂನಿಂದಲೇ ಮಾಡಬಹುದಾಗಿದೆ.
ಎಟಿಎಂ ಮೂಲಕ ಹಣ ವಿತ್ ಡ್ರಾ ಮಾಡುವುದು ಬ್ಯಾಲೆನ್ಸ್ ಚೆಕ್ ಮಾಡೋದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಆದರೆ ಎಟಿಎಂ ಮೂಲಕ ಪಡೆಯಬಹುದಾದ ಮತ್ತಷ್ಟು ಸೌಲಭ್ಯಗಳ ಕುರಿತು ನಿಮಗೆ ಮಾಹಿತಿ ಇಲ್ಲವಾದಲ್ಲಿ ಈ ಕೆಳಗಿನ ಪಾಯಿಂಟ್ಸ್ ಅನ್ನು ಒಮ್ಮೆ ಓದಿ.
* ಎಟಿಎಂ ಕೇಂದ್ರಗಳ ಮೂಲಕವೇ ತೆರಿಗೆ ಪಾವತಿ ಮಾಡಬಹುದು.
* ಕೆಲ ಎಟಿಎಂಗಳು ಹಣ ಜಮಾ ಮಾಡುವ ಸೌಲಭ್ಯವನ್ನೂ ಕಲ್ಪಿಸಿದ್ದು,. ಅಲ್ಲಿ ಒಂದು ಬಾರಿ ರೂ. 49,900 ವರೆಗೆ ಹಣ ಜಮಾ ಮಾಡಬಹುದು.
*ವಿಮೆ ಕಂಪನಿಗಳು ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡ ಹಿನ್ನಲೆಯಲ್ಲಿ ಗ್ರಾಹಕರು ಎಟಿಎಂ ಕೇಂದ್ರಗಳ ಮೂಲಕವೇ ಪ್ರೀಮಿಯಂ ಪಾವತಿ ಮಾಡಲು ಅವಕಾಶ ಸಿಕ್ಕಿದೆ.
*ಸಾಲದ ಅರ್ಜಿ ಸಲ್ಲಿಸಲು ಬ್ಯಾಂಕ್ ಗೆ ಹೋಗಬೇಕಾಗಿಲ್ಲ, ಎಟಿಎಂ ಮೂಲಕವೇ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
*ಎಟಿಎಂನಲ್ಲಿ ಸ್ಥಿರ ಠೇವಣಿ ಇಡಬಹುದು. ಜೊತೆಗೆ ಠೇವಣಿ ಅವಧಿ, ಮೊತ್ತ ಸೇರಿದಂತೆ ಎಲ್ಲ ಮಾಹಿತಿಯನ್ನು ಅದರಿಂದ ಪಡೆಯಬಹುದು.
* ಎಟಿಎಂ ಮೂಲಕ ಬೇರೆಯವರ ಖಾತೆಗೆ ಹಣವನ್ನು ವರ್ಗಾವಣೆ ಮಾಡಬಹುದು. ಒಂದು ಬಾರಿ ರೂ. 40 ಸಾವಿರವರೆಗೆ ಹಣ ವರ್ಗಾವಣೆ ಮಾಡಬಹುದು.
* ಟೆಲಿಫೋನ್, ವಿದ್ಯುತ್ ಸೇರಿದಂತೆ ಅನೇಕ ಬಿಲ್ ಗಳನ್ನು ಎಟಿಎಂ ಮೂಲಕ ಪಾವತಿ ಮಾಡುವ ಅವಕಾಶವಿದೆ.
ಆದರೆ ಎಟಿಎಂ ಮುಖಾಂತರ ಬ್ಯಾಂಕಿನ ಈ ಎಲ್ಲಾ ಕೆಲಸಗಳನ್ನು ಮಾಡುವ ಮುಂಚೆ ಬ್ಯಾಂಕ್ ವೆಬ್ ಸೈಟ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕಾಗುತ್ತದೆ.