ನವದೆಹಲಿ, ಮೇ 10 (DaijiworldNews/ AK): ಸೋಲನ್ನು ಗೆಲುವು ಮಾಡಿಕೊಳ್ಳುವ ಛಲದಲ್ಲಿ ಹಲವು ಪರೀಕ್ಷೆ ಫೇಲ್ ಆದರೂ ಅದರಲ್ಲಿಯೇ ಮತ್ತೆ ಗೆಲುವು ಕಂಡಿದ್ದು ಐಎಎಸ್ ಅಧಿಕಾರಿಯಾಗಿರುವ ಪೂಜ್ಯ ಪ್ರಿಯದರ್ಶಿನಿ .2018ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ 11ನೇ ಶ್ರೇಯಾಂಕವನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ ಪೂಜ್ಯ ಪ್ರಿಯದರ್ಶಿನಿ ಅವರ ಈ ಸಾಧನೆಯ ಹಾದಿ ರೋಚಕವಾಗಿದೆ ಅವರ ಸಕ್ಸಸ್ ಸ್ಟೋರಿ ಇಲ್ಲಿದೆ.
ಪೂಜ್ಯ ದೆಹಲಿಯಲ್ಲಿ ವಾಣಿಜ್ಯವಿಭಾಗದಲ್ಲಿ ಪದವಿಯನ್ನು ಪೂರ್ಣಗೊಳಿಸಿದ ನಂತರ ನ್ಯೂಯಾರ್ಕ್ನ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಶಿಕ್ಷಣದ ನಂತರ ಎರಡು ವರ್ಷಗಳ ಕೆಲಸ ಮಾಡಿದರು. ಆದರೆ ಯುಪಿಎಸ್ಸಿ ಪರೀಕ್ಷೆ ಮೇಲಿನ ಒಲವು ಅವರನ್ನು ಅಧ್ಯಯನ ಮಾಡುವಂತೆ ಪ್ರೇರೇಪಿಸಿತು. ಹೀಗಾಗಿ ಅವರು ಪರೀಕ್ಷೆಗೆ ಸಿದ್ಧತೆಗಳನ್ನು ಮುಂದುವರೆಸಿದರು.
ಯುಪಿಎಸ್ಸಿ ಪರೀಕ್ಷೆಯ ತಯ್ಯಾರಿ 2013 ರಲ್ಲಿ ಪ್ರಾರಂಭವಾಯಿತು. ಪೂಜ್ಯ 2013 ರಲ್ಲಿ ಪರೀಕ್ಷೆ ಎದುರಿಸಿದರು. ಆದರೆ ಇಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ. ಮತ್ತೆ ಪರೀಕ್ಷೆ ಬರೆಯಬೇಕು ಎಂಬ ನಿರ್ಧಾರದಿಂದ ಸತತ ಮೂರು ವರ್ಷ ಅಭ್ಯಾಸ ಮಾಡಿದರು. ಬಳಿಕ ಮೂರು ವರ್ಷಗಳ ವಿರಾಮವನ್ನು ತೆಗೆದುಕೊಂಡ ನಂತರ 2016 ರಲ್ಲಿ ಪರೀಕ್ಷೆ ಬರೆದರು, ನಂತರ ಪರೀಕ್ಷೆ ಪಾಸ್ ಆದರೂ ಕೂಡ ಸಂದರ್ಶನದ ಹಂತದಲ್ಲಿ ಇವರು ವಿಫಲವಾದರು.
2017ರ ಪೂರ್ವ-ಪರೀಕ್ಷೆಯಲ್ಲಿ ಹೆಸರು ಬಂದಿದ್ದರೂ ಸೋಲು ಇವರನ್ನು ಒಮ್ಮೆ ಕಂಗೆಡಿಸಿತು. ಆದರೆ ಕುಟುಂಬ ಇವರನ್ನು ಹುರಿದುಂಬಿಸಿ ಪರೀಕ್ಷೆ ಬರೆಯಲು ಉತ್ಸಾಹ, ಧೈರ್ಯ ತುಂಬಿದರು. ಹೀಗಾಗಿ ಮತ್ತೆ ಪರೀಕ್ಷೆ ತೆಗೆದುಕೊಂಡು ತೇರ್ಗಡೆಯಾದರು. 2018ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ 11ನೇ ಶ್ರೇಯಾಂಕ ಪಡೆಯುವ ಮೂಲಕ ಈಕೆ ಮೂರನೇ ಬಾರಿ ಯುಪಿಎಸ್ಸಿ ಪರೀಕ್ಷೆ ಗೆದ್ದರು.