ಭುವನೇಶ್ವರ,ಮೇ.7(DaijiworldNews/AZM): ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಫನಿ ಚಂಡಮಾರುತದಿಂದ ಸಂಕಷ್ಠಕ್ಕೆ ಒಳಗಾದ ಒಡಿಶಾ ಸಂತೃಸ್ತ ಕುಟುಂಬಗಳಿಗೆ ತಮ್ಮ ಒಂದು ವರ್ಷದ ಸಂಬಳವನ್ನು ನೀಡುವುದಾಗಿ ಘೋಷಿಸಿದ್ದಾರೆ.
ಓಡಿಶಾಕ್ಕೆ ಅಪ್ಪಳಿಸಿದ ಫಣಿ ಚಂಡಮಾರುತದ ಆರ್ಭಟದಿಂದಾಗಿ ಸುಮಾರು 34 ಜನರು ಮೃತಪಟ್ಟಿದ್ದು,ನೂರಾರು ಜನರಿಗೆ ಗಾಯಗಳಾಗಿವೆ. ಎಷ್ಟೋ ಜನರು ತಮ್ಮ ಮನೆಗಳನ್ನು ಕಳೆದುಕೊಂಡು ಬೀದಿಗೆ ಇಳಿದಿದ್ದಾರೆ. ಸಾಕಷ್ಟು ನಾಶ ನಷ್ಟಗಳು ಸಂಭವಿಸಿವೆ. ಈ ಹಿನ್ನಲೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನಿರಾಶ್ರಿತರಿಗೆ ತಮ್ಮ ಒಂದು ವರ್ಷದ ಸಂಬಳದ ಹಣ ನೀಡುವುದಾಗಿ ಘೋಷಿಸಿದ್ದಾರೆ.
ಅಲ್ಲದೆ ರಾಜ್ಯ ಸರ್ಕಾರದಿಂದ ಪರಿಹಾರ ಕಾರ್ಯಗಳಿಗೆ 381 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಹಾಗೂ ಹೆಚ್ಚುವರಿಯಾಗಿ ಕೇಂದ್ರದಿಂದ 1000 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಅನ್ನು ಕೂಡಾ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ.