ಭುವನೇಶ್ವರ,ಮೇ.7(DaijiworldNews/AZM):ಮಾಜಿ ಸೈನಿಕ ತೇಜ್ ಬಹದ್ದೂರ್ ಯಾದವ್ ಅವರು ಪ್ರಧಾನಿ ಮೋದಿಯವರನ್ನು ಹತ್ಯೆ ಮಾಡಲು 50 ಕೋಟಿ ರೂ. ನೀಡುವುದರ ಕುರಿತಾಗಿ ಮಾತನಾಡಿರುವ ವೀಡಿಯೋ ಇದೀಗ ಬಹಿರಂಗಗೊಂಡಿದ್ದು, ಈ ರೀತಿ ಮಾತನ್ನು ತಾನು ಹೇಳಲಿಲ್ಲ ವೀಡಿಯೋ ಎಡಿಟ್ ಮಾಡಲಾಗಿದೆ ಎಂದು ಯಾದವ್ ಪ್ರತಿಕ್ರಯಿಸಿದ್ದಾರೆ.
"ಈ ವಿಡಿಯೋದಲ್ಲಿರುವುದು ತಾನೇ ಆಗಿದ್ದು, ಈ ವಿಡಿಯೋವನ್ನು ನನಗೇ ಗೊತ್ತಿಲ್ಲದೆ 2017 ರಲ್ಲಿ ಮಾಡಲಾಗಿತ್ತು. ನಾನು ಸೈನಿಕರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಈ ವಿಡಿಯೋದಲ್ಲಿ ಮಾತನಾಡಿದ್ದೆ. ಆದರೆ ಯಾವುದೇ ಕಾರಣಕ್ಕೂ ಪ್ರಧಾನಿ ಮೋದಿ ಹತ್ಯೆಯ ಬಗ್ಗೆ ಮಾತನಾಡಿರಲಿಲ್ಲ. ಇದು ವಾಸ್ತವಕ್ಕೆ ದೂರವಾದುದು" ಎಂದಿದ್ದಾರೆ.
ಆದರೆ ಇಂತಹ ಒಂದು ವೀಡಿಯೋ ದೃಶ್ಯ ಇದೀಗ ಹೊರಬಿದ್ದ ಹಿನ್ನಲೆ ಬಿಜೆಪಿಗರು ಆತಂಕ ವ್ಯಕ್ತಪಡಿಸಿದ್ದಾರೆ.