ಕೋಲ್ಕತ್ತ, ಮೇ 7ಮೇ.7(DaijiworldNews/AZM): ಪ್ರಧಾನಿ ನರೇಂದ್ರ ಮೋದಿ ಅಧಿಕಾರಾವಧಿಯಲ್ಲಿ ಒಂದಾದರೂ ರಾಮ ಮಂದಿರವನ್ನು ನಿರ್ಮಿಸಿದ್ದಾರೆಯೇ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದು, 'ಶ್ರೀರಾಮ' ಬಿಜೆಪಿಗೆ ಚುನಾವಣಾ ಏಜೆಂಟ್ ಇದ್ದಂತೆ ಎಂದು ಟೀಕಿಸಿದ್ದಾರೆ.
ಪ್ರಧಾನಿ ಮೂದಿ ಸರಕಾರ ಚುನಾವಣೆ ಸಮೀಪಿಸುತ್ತಿದ್ದಂತೆ ಶ್ರೀರಾಮನನ್ನು ಚುನಾವಣಾ ಏಜೆಂಟ್ಗಳನ್ನಾಗಿ ಮಾಡಿಕೊಂಡಿದ್ದು, ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಅನ್ಯರ ಮೇಲೆ ಒತ್ತಡ ಹೇರಿತ್ತಿದ್ದಾರೆ. ಆದರೆ ಆ ರೀತಿ ಒತ್ತಡೆ ಹೇರಲು ನಿಮಗೆ ಅಧಿಕಾರಕೊಟ್ಟವರ್ಯಾರು ಎಂದು ಮಮತಾ ಪ್ರಶ್ನಿಸಿದ್ದಾರೆ.
ನಮಗೂ ಶ್ರೀರಾಮನ ಬಗ್ಗೆ ಗೌರವವಿದೆ. ಆ ಗೌರವವನ್ನು ಹೇಗೆ ತೋರಿಸಿಕೊಳ್ಳಬೇಕು ಎಂಬುದನ್ನು ನಿಮ್ಮಿಂದ ಕಲಿಯುವ ಅಗತ್ಯವಿಲ್ಲ ಎಂದಿರುವ ಮಮತಾ, ನಾನು ಜೈ ಹಿಂದ್, ವಂದೇ ಮಾತರಂ, ಮಾ, ಮಾಟಿ, ಮಾನುಷ್ ಕಿ ಜೈ, ತೃಣಮೂಲ ಕಾಂಗ್ರೆಸ್ ಕಿ ಜೈ ಎಂದು ಘೋಷಣೆ ಕೂಗುತ್ತೇನೆ ಹೊರತು, ಬಿಜೆಪಿಯ ಬಯಕೆಯ ಘೋಷಣೆಗಳನ್ನು ಎಂದಿಗೂ ಕೂಗುವುದಿಲ್ಲ ಎಂದರು.
ಜರ್ಗ್ರಾಂನಲ್ಲಿ ಸೋಮವಾರ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಶ್ರೀ ರಾಮಚಂದ್ರನನ್ನು ಪ್ರಶಂಸಿದ್ದಲ್ಲದೆ, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿ ಧೈರ್ಯವಿದ್ದರೆ ತಮ್ಮನ್ನು ಬಂಧಿಸುವಂತೆ ಮಮತಾ ಬ್ಯಾನರ್ಜಿ ಅವರಿಗೆ ಸವಾಲು ಹಾಕಿದ್ದರು. ಅಲ್ಲದೆ ಕೆಲದಿನಗಳ ಹಿಂದೆ ಮಮತಾ ಬ್ಯಾನರ್ಜಿ ತೆರಳುತ್ತಿದ್ದ ಮಾರ್ಗದಲ್ಲಿ ನಿಂತಿದ್ದ ಕೆಲವು ಯುವಕರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು.