ಮಧ್ಯಪ್ರದೇಶ, ಮೇ.13(DaijiworldNews/AK): ಹಿಂದಿ ಮೀಡಿಯಂನಲ್ಲಿ ಓದಿದ ಸುರಭಿ ಗೌತಮ್ ಡಿಗ್ರಿಯಲ್ಲಿ ಇಂಗ್ಲಿಷ್ ಸರಿಯಾಗಿ ಬಾರದೆ ಪರದಾಡಿದರು ಸುರಭಿ. ಆದರೆ ಇಂದು UPSC ತೇರ್ಗಡೆಗೊಂಡು ಐಎಎಸ್ ಅಧಿಕಾರಿಯಾಗಿರುವ ಆಕೆ, GATE, BAARC, ISRO, SAIL, SSC-CGL And IES ಹೀಗೆ ಬರೆದ ಎಲ್ಲ ಪರೀಕ್ಷೆಗಳಲ್ಲೂ ಪಾಸ್ ಆಗಿದ್ದಾರೆ. ಸುರಭಿ ಗೌತಮ್ ಅವರ ಸ್ಪೂರ್ತಿದಾಯ ಸ್ಟೋರಿ ಇಲ್ಲಿದೆ.
ಬಡತನದಿಂದ ಬಂದ ಸುರಭಿ ಜೀವನ ಪಯಣವು ಬಹಳ ಕಷ್ಟದಿಂದ ಕೂಡಿತ್ತು. ಅಷ್ಟೇ ಅಲ್ಲ ಹಣಕಾಸಿನ ಅಡೆತಡೆಗಳು ಹಾಗೂ ಮಧ್ಯಪ್ರದೇಶದ ಅಮ್ದಾರಾ ಎಂಬ ಹಳ್ಳಿಯ ವಾತಾವರಣ ಆಕೆಯನ್ನು ಆಂಗ್ಲ-ಮಾಧ್ಯಮ ಶಿಕ್ಷಣವನ್ನು ಪಡೆಯುವುದನ್ನು ವಿಫಲಮಾಡಿತ್ತು. 12ನೇ ತರಗತಿಯವರೆಗೆ ಹಿಂದಿ-ಮಾಧ್ಯಮ ಶಾಲೆಯಲ್ಲಿ ಓದಿದ ಸುರಭಿ, ಸಾಲದೆಂಬಂತೆ ಆರೋಗ್ಯ ಸಮಸ್ಯೆಗಳಿಂದಲೂ ಬಳಲುತ್ತದ್ದರು.
ಬಳಿಕ ಡಿಗ್ರಿಗೆ ಸೇರಿದಾಗ ಅಲ್ಲಿ ಆಕೆ ಇಂಗ್ಲಿಷ್ನಲ್ಲಿ ಅಷ್ಟಾಗಿ ತಿಳಿದಿಲ್ಲದ್ದ ಕಾರಣ ತೊಂದರೆಗಳನ್ನು ಎದುರಿಸಬೇಕಾಯಿತು. ಜೊತೆಗೆ ಸಹಪಾಠಿಗಳು ಗೇಲಿ ಮಾಡಿದರು. ಇದರ ಮಧ್ಯೆಯೂ ಓದಿನ ಹಠ ಇದ್ದ ಕಾರಣ ಮೊದಲ ಸೆಮಿಸ್ಟರ್ನಲ್ಲಿ ತನ್ನ ವಿಶ್ವವಿದ್ಯಾನಿಲಯ ಪರೀಕ್ಷೆಗಳಲ್ಲಿ ಉನ್ನತ ಸಾಧನೆ ಮಾಡಿದರು.
20ನೇ ವಯಸ್ಸಿನಲ್ಲಿ ಪ್ರತಿಷ್ಠಿತ BARC ನಲ್ಲಿ ಅಸ್ಕರ್ ಸ್ಥಾನವನ್ನು ಪಡೆದುಕೊಂಡ ಸುರಭಿ ಮೈಲಿಗಲ್ಲೊಂದನ್ನು ಸಾಧಿಸಿದ್ದರು. ನಂತರ ಬಾರ್ಕ್ನಲ್ಲಿ ನ್ಯೂಕ್ಲಿಯರ್ ಸೈಂಟಿಸ್ಟ್ ಆಗಿ ಕೆಲಸ ಮಾಡಿದರು.
ಆದರೆ, ಅಲ್ಲಿಗೇ ಸುಮ್ಮನಾಗದೆ 21ನೇ ವಯಸ್ಸಿನಲ್ಲಿ, ಭಾರತೀಯ ಎಂಜಿನಿಯರಿಂಗ್ ಸೇವೆಗಳ (ಐಇಎಸ್) ಪರೀಕ್ಷೆಯಲ್ಲಿ ಅಖಿಲ ಭಾರತ 1ನೇ ಶ್ರೇಯಾಂಕ ಗಳಿಸಿದರು. 2ನೇ ವಯಸ್ಸಿನಲ್ಲಿ ಅವರ ಅಧಿಕಾರಾವಧಿಯನ್ನು ಪ್ರಾರಂಭಿಸಿದರು. ಅಲ್ಲಿಗೆ ಸುಮ್ಮನಾಗದ ಆಕೆ 25ನೇ ವಯಸ್ಸಿನಲ್ಲಿ ಸಿವಿಲ್ ಸರ್ವೀಸಸ್ ಪರೀಕ್ಷೆ (CSE) ಬರೆದು 50ನೇ ಅಖಿಲ ಭಾರತ ಶ್ರೇಣಿಯೊಂದಿಗೆ ಯಶಸ್ವಿಯಾಗಿ ಉತ್ತೀರ್ಣರಾದರು.
ಗೇಟ್, ಬಾರ್ಕ್, ಇಸ್ರೋ, ಸೇಲ್, ದಿಲ್ಲಿ ಪೋಲೀಸ್, ಎಸ್ಎಸ್ಸಿ-ಸಿಜಿಎಲ್ ನಂತಹ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವ ಮೂಲಕ ಅದ್ಭುತ ಪ್ರತಿಭೆಯಾಗಿ ಗುರುತಿಸಿಕೊಂಡ ಸುರಭಿ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸದ್ಯ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆಒಟ್ಟಾರೆ ಸುರಭಿಯವರ ಜೀವನ ಪಯಣವು ಅವರ ಗಮನಾರ್ಹ ಸಾಧನೆಗಳಿಗೆ ಸಾಕ್ಷಿಯಾಗುವ ಮೂಲಕ ಅನೇಕರಿಗೆ ಸ್ಫೂರ್ತಿಯ ದಾರಿದೀಪವಾಗಿದ್ದಾರೆ ಎಂದರೆ ತಪ್ಪಾಗಲಾರದು.