ಹಾಸನ , ಮೇ. 15(DaijiworldNews/AK): ಪ್ರಜ್ವಲ್ ರೇವಣ್ಣ ವಿಡಿಯೋ ಹಂಚಿಕೆ ಮಾಡಿದ ಪ್ರಕರಣ ಸಂಬಂಧ ಹಾಸನದ 6 ಕಡೆ ಇಂದು ಎಸ್ಐಟಿ ದಾಳಿ ನಡೆಸಿದೆ.
ದೇವರಾಜೇಗೌಡ ನಿವಾಸ, ಕಚೇರಿ, ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಆಪ್ತ ಶರತ್ ಒಡೆತನದ ಬಾರ್ ಮತ್ತು ನಿವಾಸ, ಕಿರಣ್ ಒಡೆತನದ ಹೋಟೆಲ್, ನಿವಾಸ ಮತ್ತು ಪುನೀತ್ ನಿವಾಸ ಸೇರಿ ಒಟ್ಟು ಆರು ಕಡೆ ಮೇಲೆ ಎಸ್ಐಟಿ ದಾಳಿ ನಡೆಸಿದೆ.
ಪೆನ್ಡ್ರೈವ್ ಹಂಚಿಕೆ ಮಾಡಿದವರ ವಿರುದ್ಧ ದೂರು ದಾಖಲಿಸಲು ಹೊಳೆನರಸೀಪುರ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ತುರ್ತು ವಿಚಾರಣೆಗೆ ಹೈಕೋರ್ಟ್ ನಿರಾಕರಿಸಿದೆ. ಎಸ್ಐಟಿ ತನಿಖೆ ನಡೆಸುತ್ತಿದ್ದು ಈ ಹಂತದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದಿದೆ. ವಿಡಿಯೋ ವೈರಲ್ ಮಾಡಿದ ಆರೋಪದ ಮೇಲೆ ಅರೆಸ್ಟ್ ಆಗಿರುವ ಲಿಖಿತ್ಗೌಡ, ಚೇತನ್ ಜಾಮೀನು ಅರ್ಜಿಯನ್ನು ಹಾಸನ ಕೋರ್ಟ್ ವಜಾ ಮಾಡಿದೆ.
ಸಂತ್ರಸ್ತೆ ಕಿಡ್ನಾಪ್ ಕೇಸಲ್ಲಿ ಮತ್ತೋರ್ವ ಆರೋಪಿ ಹೊಸೂರು ಕೀರ್ತಿಯನ್ನು ಪೊಲೀಸರು ಬಂಧಿಸಿ 4 ದಿನ ಕಸ್ಟಡಿಗೆ ಪಡೆದುಕೊಂಡಿದ್ದಾರೆ.