ನವದೆಹಲಿ, ಮೇ07(Daijiworld News/SS): ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಕುರಿತು ಹೇಳಿಕೆ ನೀಡಿದ್ದ ಪ್ರಧಾನಿ ಮೋದಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದೆ.
ರಾಜೀವ್ ಸಾಯುವ ಮುನ್ನ ಅವರು ನಂ 1 ಭ್ರಷ್ಟರಾಗಿದ್ದರು ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಟೀಕೆ ಸಂಬಂಧ ಚುನಾವಣಾ ಆಯೋಗ (ಇಸಿ) ಪ್ರಧಾನಿಗೆ ಕ್ಲೀನ್ ಚಿಟ್ ನೀಡಿದೆ.
ಪ್ರಧಾನಿ ಮೋದಿ ವಿರುದ್ಧ ಮಾದರಿ ನೀತಿ ಸಂಹಿತೆ ಆರೋಪ ಮಾಡಿದ್ದ ಕಾಂಗ್ರೆಸ್ ಆಯೋಗಕ್ಕೆ ದೂರು ಸಲ್ಲಿಸಿತ್ತು. ರಾಜೀವ್ ಅವರ ವಿರುದ್ಧ ಮೋದಿ ಟೀಕಿಸಿರುವುದು ಖಂಡನಾರ್ಹ ಎಂದಿದ್ದ ಕಾಂಗ್ರೆಸ್ ಮೋದಿ ಭಾರತ ರತ್ನ ಪುರಸ್ಕೃತರಿಗೆ ಅವಮಾನಿಸಿದ್ದಾರೆ ಎಂದು ಹೇಳಿತ್ತು.
ಇದೀಗ ಇದಕ್ಕೆ ಪ್ರತಿಕ್ರಿಯಿಸಿರುವ ಆಯೋಗ ಪ್ರಧಾನಿಯವರ ಹೇಳಿಕೆಗಳಲ್ಲಿ ಭಾರತ ಚುನಾವಣಾ ಆಯೋಗದ ಸೂಚನೆಯಲ್ಲಿರುವಂತೆ ಎಂಸಿಸಿಯ ಯಾವುದೇ ಉಲ್ಲಂಘನೆಯನ್ನು ನಾವು ಗಮನಿಸಲಿಲ್ಲ. ಹೀಗಾಗಿ ಈ ಪ್ರಕರಣವನ್ನು ಇಲ್ಲಿಗೇ ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿಸಿದೆ.