ನವದೆಹಲಿ, ಮೇ. 21(DaijiworldNews/AK):ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಕುರಿತು ಜನರ ಪ್ರತಿಕ್ರಿಯೆ ಗಮನಾರ್ಹವಾಗಿ ಬದಲಾಗಿದೆ. ಇದು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಪಡೆಯುವುದನ್ನು ತಡೆಯಲು ಸಹಾಯಕವಾಗಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ನ ಖರ್ಗೆ
ಹೇಳಿದ್ದಾರೆ.
ಪಿಟಿಐಗೆ ನೀ ಡಿದ ಸಂದರ್ಶ ನದಲ್ಲಿ ಮಾತಾನಾಡಿದ ಅವರು, ಸಮಾಜದಲ್ಲಿ ದ್ವೇಷ ಮತ್ತು ವಿಭಜನೆ ಮನೋಭಾವನೆಯನ್ನು ಹರಡುವ ಬಿಜೆಪಿ ಮತ್ತು ಆರ್ ಎಸ್ಎಸ್ ಸಿದ್ಧಾಂತದ ವಿರುದ್ಧ ಜನರು ಈಗ ಹೋರಾಡುತ್ತಿದ್ದಾರೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ಇಂಡಿಯಾ ಮೈತ್ರಿಕೂಟ ಹೋರಾಟ ನಡೆಸುತ್ತಿದೆ ಎಂಬುದು ಜನರಿಗೆ ತಿಳಿದಿದೆ. ಆದ್ದರಿಂದಲೇ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ರಾಮ ಮಂದಿರ, ಹಿಂ ದೂ– ಮುಸ್ಲಿಂ ಮತ್ತು ಭಾರತ– ಪಾಕಿಸ್ತಾನದ ಹೆಸರಿನಲ್ಲಿ ಜನರನ್ನು ಬಿಜೆಪಿ ಪದೇ ಪದೇ ಪ್ರಚೋದಿಸುತ್ತಿದೆ. ಅಲ್ಲದೆ, ಜನರನ್ನು ಭಾವನಾತ್ಮವಾಗಿ ಲೂಟಿ ಮಾಡುತ್ತಿದೆ. ಜನರು ಈಗ ಬಿಜೆಪಿಯ ನಿಜವಾದ ಬಣ್ಣವನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಖರ್ಗೆ
ಹೇಳಿದ್ದಾರೆ.
ಎರಡು ಕೋ ಟಿ ಉದ್ಯೋ ಗ ಸೃಷ್ಟಿ, ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರುವುದು, ರೈ ತರ ಆದಾಯ ದ್ವಿಗುಣಗೊಳಿಸುವುದು ಹೀ ಗೆ ಈ ಹಿಂದೆ ನೀ ಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಬಿಜೆಪಿ ಸುಳ್ಳುಗಳನ್ನು ಹೇಳುವ ಮೂಲಕ ಜನರನ್ನು ಮೂರ್ಖ ರನ್ನಾಗಿಸುತ್ತಿದೆ ಎಂದು ಖರ್ಗೆ ಆರೋ ಪಿಸಿದ್ದಾರೆ.