ನವದೆಹಲಿ ಮೇ 08 (Daijiworld News/MSP): ಪಾಕಿಸ್ತಾನದ ಸಾಗರ ಭದ್ರತಾ ಪಡೆ 34 ಮಂದಿ ಭಾರತೀಯ ಮೀನುಗಾರರನ್ನು ಮಂಗಳವಾರ ರಾತ್ರಿ ಬಂಧಿಸಿದೆ ಬಂಧಿಸಿದ್ದು, ಆರು ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ. ಭಾರತೀಯ ಬೆಸ್ತರು ಪಾಕ್ ಸಮುದ್ರದಲ್ಲಿ ಮೀನು ಹಿಡಿಯುತ್ತಿದ್ದರು ಎಂದು ಆರೋಪಿಸಲಾಗಿದೆ.
ಬಂಧಿತ ಭಾರತೀಯ ಮೀನುಗಾರರನ್ನು ಪಾಕ್ ನ ಸ್ಥಳೀಯ ಬಂದರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಅವರನ್ನು ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸಲಾಗುವುದು ಎಂದು ಸಾಗರ ಭದ್ರತಾ ಪಡೆಯ ವಕ್ತಾರರು ತಿಳಿಸಿದ್ದಾರೆ.
ಪಾಕಿಸ್ತಾನವೂ ಜನವರಿ ತಿಂಗಳಲ್ಲೂ ಸಮುದ್ರಗಡಿ ದಾಟಿದ ಆರೋಪದ ಮೇಲೆ ಐವರು ಭಾರತೀಯ ಮೀನುಗಾರರನ್ನು ಬಂಧಿಸಿತ್ತು. ಆ ಬಳಿಕ ಮೀನುಗಾರರನ್ನು ಬಂಧಿಸಿರುವುದು ಇದೇ ಮೊದಲು.
ಶಾಂತಿಯ ಸಂಕೇತವಾಗಿ 360 ಮೀನುಗಾರರ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಸರ್ಕಾರ ಕಳೆದ ತಿಂಗಳು ತಿಳಿಸಿತ್ತು. ಆದರೆ ಬಳಿಕ ತನ್ನ ನಿಲುವು ಬದಲಾಯಿಸಿ ಕರಾಚಿಯ ಲಾಂಧೀ ಮತ್ತು ಮಲೀರ್ ಜೈಲುಗಳಲ್ಲಿದ್ದ 250 ಭಾರತೀಯ ಮೀನುಗಾರರನ್ನಷ್ಟೇ ಬಿಡುಗಡೆ ಮಾಡಿತ್ತು. ಸಮುದ್ರದಲ್ಲಿ ಮೀನುಗಾರಿಕೆ ವೇಳೆ ಆಕಸ್ಮಿಕವಾಗಿ ಜಲ ಗಡಿ ದಾಟುವ ಭಾರತ ಮತ್ತು ಪಾಕಿಸ್ತಾನದ ಮೀನುಗಾರರು ಆಗಾಗ ಬಂಧನಕ್ಕೊಳಗಾಗುತ್ತಿರುತ್ತಾರೆ. ಆದರೆ, ಇತ್ತೀಚಿನ ಕೆಲವು ತಿಂಗಳುಗಳಲ್ಲಿ 30ಕ್ಕೂ ಹೆಚ್ಚು ಮೀನುಗಾರರ ಬಂಧನವಾಗಿರುವುದು ಇದೇ ಮೊದಲು