ಬೆಂಗಳೂರು, ಮೇ. 21(DaijiworldNews/AK): ಸರ್ಕಾರ ಒಂದು ವರ್ಷ ಪೂರೈಸಿದ್ದು ಮುಖ್ಯವಲ್ಲ, ನಾಲ್ಕು ವರ್ಷಗಳಲ್ಲಿ ನನ್ನ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆದ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಕೆಪಿಸಿಸಿ ಘಟಕದಿಂದ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರ ಒಂದು ವರ್ಷ ಪೂರೈಸಿದ್ದು ಮುಖ್ಯವಲ್ಲ, ನಾಲ್ಕು ವರ್ಷಗಳಲ್ಲಿ ನನ್ನ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ಅದು ಮುಖ್ಯ ಎಂದು ತಿಳಿಸಿದರು.
ಬಿಬಿಎಂಪಿ ಎಲೆಕ್ಷನ್ ಬಗ್ಗೆ ಈಗ ಚರ್ಚೆ ಬೇಡ ಇನ್ನು ಸಮಯವಿದೆ. ರಾಜೀವ್ ಗಾಂಧಿ ತಂದ ತಿದ್ದುಪಡಿಯಿಂದಲೇ ಸ್ಥಳೀಯ ಸಂಸ್ಥೆಗಳಿಗೆ ಎಲೆಕ್ಷನ್ ನಡೀತಿರೋದು. ಇದಕ್ಕೆಲ್ಲಾ ನೀವು ತಯಾರಿ ಮಾಡಿಕೊಳ್ಳಬೇಕು. ಎಂಪಿ ಎಲೆಕ್ಷನ್ನಲ್ಲಿ ಗೆದ್ವೋ ಸೋತ್ವೋ ಮುಖ್ಯವಲ್ಲ. ಎಲ್ಲಾ ಸೆಲ್ಗಳಲ್ಲಿ ಲೀಡರ್ಗಳು ಆ್ಯಕ್ಟೀವ್ ಆಗಿರಬೇಕು. ಇಲ್ಲಾಂದ್ರೆ ಡಿಸಾಲ್ವ್ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಬೂತ್ ಮಟ್ಟದಲ್ಲಿ ಲೀಡ್ ಕೊಡಬೇಕು, ಇಲ್ಲಾಂದ್ರೆ ಅಧಿಕಾರ ಯಾರೂ ಕೇಳಬಾರದು. ಖಾದಿ ಬಟ್ಟೆ, ಒಂದು ಕಾರ್ ಇಟ್ಕೊಂಡು ಎಂಎಲ್ಎ, ಎಂಎಲ್ಸಿ ಮಾಡಿ ಅಂದ್ರೆ ಆಗಲ್ಲ. ಲೀಡ್ ತಂದು ಕೊಡಬೇಕು. ಇಲ್ಲಾಂದ್ರೆ ಹೊಸಬರನ್ನ ತಯಾರಿ ಮಾಡ್ತೀವಿ ಹೇಳಿದರು.
ಮೂರ್ನಾಲ್ಕು ತಿಂಗಳಲ್ಲಿ ಪ್ಲ್ಯಾನ್ ಆಫ್ ಆಕ್ಷನ್ ರೆಡಿ ಮಾಡ್ತೀವಿ. ಎಲ್ಲದಕ್ಕೂ ತಾವು ತಯಾರಾಗಿರಬೇಕು. ನಾಲ್ಕು ವೋಟ್ ಹಾಕಿಸದೆ ಬಂದು ಸ್ಥಾನ ಕೇಳುತ್ತೀರಾ ಎಂದು ಪ್ರಶ್ನಿಸಿದರು.