ನವದೆಹಲಿ,ಮೇ 08 (Daijiworld News/MSP): ಪ್ರಧಾನಿ ಮೋದಿಗೆ ಪ್ರಜಾಪ್ರಭುತ್ವದ ಕಪಾಳಮೋಕ್ಷದ ಅಗತ್ಯವಿದೆ ಎಂಬ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ ಬೆನ್ನಲ್ಲೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಮತಾ ವಿರುದ್ದ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.
"ನೀವು ಎಲ್ಲಾ ಮಿತಿಗಳನ್ನು ಮೀರಿದ್ದೀರಿ " ಟ್ವೀಟ್ ಮಾಡುವ ಮೂಲಕ ಸುಷ್ಮಾ ಸ್ವರಾಜ್ ಮಮತಾ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋದಿಯನ್ನು ನಾನು ಪ್ರಧಾನಿ ಎಂದು ಒಪ್ಪಲು ತಯಾರಿಲ್ಲ. ಅವರಿಗೆ ಜಾಪ್ರಭುತ್ವದ ಬಿಗಿ ಕಪಾಳಮೋಕ್ಷ ಸಿಗಬೇಕು’ ಎಂದು ಅನ್ನಿಸುತ್ತಿದೆ ಎಂದ ಮಮತಾ ಅವರ ವಿರುದ್ಧ ಟ್ವೀಟ್ ಮಾಡಿರುವ ಸುಷ್ಮಾ , " ಮಮತಾ ಅವರೇ , ನೀವು ಇಂದು ಎಲ್ಲ ಮಿತಿಗಳನ್ನು ಮೀರಿದ್ದೀರಿ. ನೀವು ರಾಜ್ಯದ ಮುಖ್ಯಮಂತ್ರಿ, ಮತ್ತು ಮೋದಿ ದೇಶದ ಪ್ರಧಾನ ಮಂತ್ರಿ, ನಾಳೆ ನಿಮಗೆ ಅವರೊಂದಿಗೆ ಮಾತನಾಡಲೇ ಬೇಕು. ಇದಕ್ಕಾಗಿ ನಾನು ಬಶೀರ ಬಾದ್ರ ಅವರ ಕವಿತೆಯ ಸಾಲುಗಳನ್ನು ನೆನಪಿಸುತ್ತೇನೆ, ದುಶ್ಮನಿ ಜಮ್ ಕರ್ ಕರೋ ಲೇಕಿನ್ ಯೇ ಗುಂಜಾಯಿಶ್ ರಹೆ. ಜಬ್ ಕಭಿ ಹಮ್ ದೋಸ್ತ್ ಹೋ ಜಾಯೇ ತೋ ಶರ್ಮಿಂದಾ ನ ಹೋ ..(ವೈರತ್ವವನ್ನು ಮಾಡಿ ಆದರೆ ಮಿತಿ ಇರಲಿ, ನಾಳೆ ಮಿತ್ರರಾದರೆ ನಾಚಿಕೆ ಪಡಬೇಡಿ) ಎಂದು ಬರೆದಿದ್ದಾರೆ.
ಮಂಗಳವಾರದಂದು ಪ್ರಧಾನಿ ಮೋದಿಗೆ ತಿರುಗೇಟು ನೀಡುತ್ತಾ ಮಾತನಾಡಿದ ಮಮತಾ ಬ್ಯಾನರ್ಜಿ, 'ಮೋದಿ ಅವರು ಬಂಗಾಳಕ್ಕೆ ಬಂದು ನನ್ನನ್ನು ದೊಡ್ಡ ಸುಲಿಗೆಕೋರಳು ಎಂದು ಹೇಳುತ್ತಾರೆ. ಅವರ ಕಪಾಳಕ್ಕೆ ಹೊಡೆಯಲು ನಾನು ಬಯಸುತ್ತೇನೆ. ಪ್ರಜಾಪ್ರಭುತ್ವದ ಕಪಾಳಮೋಕ್ಷ ಅವರಿಗೆ ಅಗತ್ಯವಿದೆ' ಎಂದಿದ್ದರು