ಉತ್ತರಪ್ರದೇಶ, ಮೇ 24 (DaijiworldNews/ AK):ಅಪಾಲ ಅವರು ನಾಗರಿಕ ಸೇವೆಗೆ ಸೇರುವ ಮೊದಲು ವೈದ್ಯರಾಗಿದ್ದರು. ಅವರು 2020ರ ಬ್ಯಾಚ್ನ ಐಎಫ್ ಎಸ್ ಅಧಿಕಾರಿ.ಇವರ ಸಾಧನೆಯ ಯಶಸ್ಸಿನ ಕಥೆ ತಿಳಿಯೋಣ.
ತಂದೆ ಮತ್ತು ಸಹೋದರ ಸೈನ್ಯದಲ್ಲಿ ಅಧಿಕಾರಿಗಳಾಗಿದ್ದಾರೆ.IFS ಅಪಾಲ ಮಿಶ್ರಾ ಅವರು 1997 ರಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಜನಿಸಿದ್ದಾರೆ. ಅಪಾಲ ಅವರ ತಂದೆ ಮತ್ತು ಸಹೋದರ ಇಬ್ಬರು ಸೈನ್ಯದಲ್ಲಿ ಅಧಿಕಾರಿ.ಮಿಶ್ರಾ ಸೇನಾ ಕುಟುಂಬಕ್ಕೆ ಸೇರಿದವರು. ಇವರ ತಂದೆ ಅಮಿತಾಭ್ ಮಿಶ್ರಾ ಅವರು ಕರ್ನಲ್ ಆಗಿದ್ದಾರೆ. ಸಹೋದರ ಅಭಿಷೇಕ್ ಮಿಶ್ರಾ ಕೂಡ ಸೇನೆಯಲ್ಲಿ ಮೇಜರ್ .
ಇನ್ನು ಅಪಾಲ ಅವರ ತಾಯಿ ಡಾ. ಅಲ್ಪನಾ ಮಿಶ್ರಾ ದೆಹಲಿ ವಿಶ್ವವಿದ್ಯಾಲಯದ ಹಿಂದಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಅಪಾಲಾ ಮಿಶ್ರಾ ಡೆಹ್ರಾಡೂನ್ ನಲ್ಲಿ 10 ನೇ ತರಗತಿಯವರೆಗೆ ಓದಿ. ಇದಾದ ನಂತರ ದೆಹಲಿಯ ರೋಹಿಣಿಯಲ್ಲಿ 12ನೇ ತರಗತಿಯವರೆಗೆ ಓದಿದರು.ಬಳಿಕ ಅಪಾಲಾ ಅವರು ಆರ್ಮಿ ಕಾಲೇಜಿನಲ್ಲಿ ಬಿಡಿಎಸ್ ಮಾಡಿದ್ದಾರೆ, ನಂತರ ಅವರು ದಂತವೈದ್ಯ ಪದವಿ ಪಡೆದರು. ಸಮಾಜಕ್ಕಾಗಿ ಕೆಲಸ ಮಾಡಲು ಬಯಸುತ್ತಿದ್ದ ಅಪಾಲ ಸಿವಿಲ್ ಸರ್ವಿಸ್ ಸೇರಲು ನಿರ್ಧರಿಸಿದರು.
ಅಪಾಲ ಮೆಡಿಕಲ್ ಪ್ರ್ಯಾಕ್ಟೀಸ್ ಬಿಟ್ಟು UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. ತನ್ನ ಎರಡು ಪ್ರಯತ್ನಗಳಲ್ಲಿ ಯುಪಿಎಸ್ ಸಿ ಪ್ರಿಲಿಮ್ಸ್ ಪರೀಕ್ಷೆಯನ್ನು ಸಹ ಪಾಸ್ ಆಗಲು ಆಗಲಿಲ್ಲ.ಬಳಿಕ ಛಲ ಬಿಡದೆ ಅಪಾಲ ಮತ್ತೆ ಪ್ರಯತ್ನಿಸಿದರು. ಮೂರನೇ ಪ್ರಯತ್ನದಲ್ಲಿ 9 ನೇ ರ್ಯಾಂಕ್ ಪಡೆಯುವ ಮೂಲಕ ಐಎಎಸ್ ಟಾಪರ್ ಗಳ ಪಟ್ಟಿಗೆ ಸೇರಿಕೊಂಡರು. ಅವರು UPSC ಸಂದರ್ಶನದಲ್ಲಿ 275 ಅಂಕಗಳಿಗೆ 215 ಅಂಕಗಳನ್ನು ಗಳಿಸಿದ್ದಾರೆ.