ಹರ್ಯಾಣ, ಮೇ 08 (Daijiworld News/MSP): ರೈತರ ಜಮೀನು ಕೊಳ್ಳೆ ಹೊಡೆದ ’ರಾಜಾಧಿರಾಜ’ ಇಂದು ನ್ಯಾಯಾಲಯದ ಮುಂದೆ ಜಾಮೀನಿಗಾಗಿ ಹೋರಾಡುತ್ತಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಿಯಾಂಕ ಗಾಂಧಿಯ ಪತಿ ರಾಬರ್ಟ್ ವಾದ್ರಾ ವಿರುದ್ಧ ವಾಗ್ದಾಳಿ ನಡೆಸಿದರು.
ಹರ್ಯಾಣದಲ್ಲಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ನರೇಂದ್ರ ಮೋದಿ , ತಮ್ಮ ಭಾಷಣದಲ್ಲಿ ರಾಬರ್ಟ್ ವಾದ್ರಾ ಹೆಸರು ಉಲ್ಲೇಖಿಸದೆ ರಾಜಾಧಿರಾಜ (ಶಹೆನ್ಶಾ) ಎಂದು ಕರೆದು ಒಂದು ಕಾಲದಲ್ಲಿ ಮೆರೆದಾಡಿದ ರಾಜ ಇಂದು ಜೈಲಿನ ಬಾಗಿಲಲ್ಲಿ ನಿಂತು ಒಳಗೆ ಹೋಗದಂತೆ ಜಾಮೀನಿಗಾಗಿ ಹೋರಾಡುತ್ತಿದ್ದಾನೆ ಎಂದರು.
ನಿಮ್ಮ ಚೌಕಿದಾರ ರೈತರನ್ನು ಭೂಮಿಯನ್ನು ಕೊಳ್ಳೆ ರಾಜಾಧಿರಾಜನಂತೆ ಬದುಕುತ್ತಿದ್ದ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಎಳೆದುತಂದಿದ್ದೇನೆ. ಆ ಮನುಷ್ಯ ಇದೀಗ ಇ.ಡಿ ಮತ್ತು ನ್ಯಾಯಾಲಯ ಬಾಗಿಲಲ್ಲಿದ್ದು ಜಾಮೀನು ತನ್ನ ಹೋರಾಟ ಮುಂದುವರಿಸಿದ್ದೇನೆ. ನಿಮೆಲ್ಲರೂ ನನಗೆ ಆಶೀರ್ವಾದ ಮಾಡಿದ್ರೆ, ರಾಜಾಧಿರಾಜನನ್ನು ಜೈಲಿನಲ್ಲಿರುವಂತೆ ಮಾಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.