ನವದೆಹಲಿ, ಮೇ 27 (DaijiworldNews/AK):ಯುಪಿಎಸ್ ಸಿ ಪರೀಕ್ಷಾ ಸಾಧಕರಾದ ಮಹಿಳಾ ಐಎಎಸ್ ಅಧಿಕಾರಿ ವಿಶಾಖ ಯಾದವ್ ಅವರು ಲಕ್ಷಗಳ ಸಂಬಳದ ಉದ್ಯೋಗ ಬಿಟ್ಟು ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಿದ ಇವರ ಯಶಸ್ಸಿನ ಹಾದಿ ತಿಳಿಯೋಣ.
ವಿಶಾಖ ಯಾದವ್ ದೆಹಲಿಯ ನಿವಾಸಿ. ಅವರು ತಮ್ಮ ಶಾಲಾ ಶಿಕ್ಷಣವನ್ನು ದೆಹಲಿಯಲ್ಲೇ ಮಾಡಿದ್ದಾರೆ. ವಿಶಾಖ ಅವರು ಬಾಲ್ಯದಿಂದಲೂ ಅಧ್ಯಯನದಲ್ಲಿ ಚುರುಕಾಗಿದ್ದ ಅವರು 10, 12 ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದರು.
ವಿಶಾಖ ಅವರು ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಬಳಿಕ ಇಂಜಿನಿಯರಿಂಗ್ ಮಾಡಿದ್ದಾರೆ. ಕ್ಯಾಂಪಸ್ ಸೆಲೆಕ್ಷನ್ ನಲ್ಲಿಯೇ ವಿಶಾಖ ಅವರಿಗೆ ಲಕ್ಷಗಳ ಸಂಬಳದ ಕೆಲಸ ಸಿಕ್ಕಿತ್ತು.
ಆದರೆ ವಿಶಾಖ ಅವರಿಗೆ ತಮ್ಮ ಉದ್ಯೋಗದ ಬಗ್ಗೆ ತೃಪ್ತಿ ಇರಲಿಲ್ಲ. ಹೀಗಾಗಿ ಎರಡು ವರ್ಷಗಳ ಬಳಿಕ ಕೆಲಸ ತೊರೆದು UPSC ಪರೀಕ್ಷೆಗೆ ತಯಾರಿ ನಡೆಸಲು ನಿರ್ಧರಿಸಿದರು. ಪರೀಕ್ಷಾ ತಯಾರಿಗಾಗಿ ಅವರು ತಮ್ಮ ದೊಡ್ಡ ಸಂಬಳದ ಕೆಲಸಕ್ಕೆ ರಾಜೀನಾಮೆ ನೀಡಿದರು.
ಮೊದಲ ಎರಡು ಪ್ರಯತ್ನಗಳಲ್ಲಿ ವಿಶಾಖ ಅವರಿಗೆ ಪ್ರಿಲಿಮ್ಸ್ ಸಹ ಪಾಸ್ ಮಾಡಲು ಸಾಧ್ಯವಾಗಲಿಲ್ಲ. ಆದರೆ ಛಲ ಬಿಡದೆ ಕೊನೆಗೆ ಮೂರನೇ ಪ್ರಯತ್ನದಲ್ಲಿ ಅಖಿಲ ಭಾರತ ಮಟ್ಟದಲ್ಲಿ 6ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದರು.
ಮೊದಲ ಎರಡು ಸೋಲುಗಳಿಂದ ವಿಶಾಖ ಕಂಗೆಡದೆ ತಮ್ಮ ಸೋಲಿನಿಂದ ಪಾಠ ಕಲಿತ 3ನೇ ಪ್ರಯತ್ನದಲ್ಲಿ ಪರೀಕ್ಷೆಯ ಎಲ್ಲಾ ಮೂರು ಹಂತಗಳನ್ನು ದಾಟಿ ಟಾಪರ್ ಎನಿಸಿಕೊಂಡರು.