ನವದೆಹಲಿ, ಮೇ07(Daijiworld News/SS): ಪಾಕಿಸ್ತಾನಕ್ಕೆ ಹೆದರದ ನಾನು ಕೇಜ್ರಿವಾಲ್ ಜೊತೆ ಚರ್ಚೆಗೇಕೆ ಹೆದರಲಿ ಎಂದು ಪೂರ್ವ ದೆಹಲಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಗೌತಮ್ ಗಂಭೀರ್ ಪ್ರಶ್ನಿಸಿದ್ದಾರೆ.
ಕೇಜ್ರಿವಾಲ್ ನಾನು ಬಹಿರಂಗ ಚರ್ಚೆಗೆ ಹೆದರುತ್ತೇನೆ ಎನ್ನುತ್ತಾರೆ. ಪಾಕಿಸ್ತಾನಕ್ಕೆ ಹೆದರದ ನಾನು ಚರ್ಚೆಗೇಕೆ ಹೆದರಲಿ. ನನ್ನೊಂದಿಗೆ ಅರ್ಥ ಗಂಟೆ ಚರ್ಚೆ ಮಾಡಿ, ಸ್ಥಳ ಹಾಗೂ ಸಮಯ ನೀವೇ ನಿಗದಿ ಮಾಡಿ ಎಂದು ಕೇಜ್ರಿವಾಲ್ಗೆ ಸವಾಲು ಹಾಕಿದ್ದರು.
ಚುನಾವಣಾ ಸಭೆಯೊಂದರಲ್ಲಿ ಮಾತನಾಡಿದ ಅವರು, ತಮ್ಮ 15 ವರ್ಷಗಳ ಕ್ರಿಕೆಟ್ ಬದುಕಿಗಿಂತ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ 15 ಗಂಟೆಗಳಲ್ಲಿ ಹಲವು ಆರೋಪಗಳನ್ನು ಎದುರಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆಪ್ ಮುಖಂಡರು ನನ್ನ ನಾಮಪತ್ರ ರದ್ದು ಮಾಡಿ ಎಂದರು. ನನ್ನ ಬಳಿ ಎರಡು ವೋಟರ್ ಐಡಿ ಇದೆ ಎಂದರು. ನನ್ನ ಮೇಲೆ ಎಫ್ಐಈರ್ ದಾಖಲಾಗಿದೆ ಎಂದರು. ಇದೇ ಅಲ್ಲದೆ ನಾನು 240 ದಿನಗಳು ವಿದೇಶದಲ್ಲಿರುತ್ತೇನೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದರು ಎಂದು ಹೇಳಿದರು.