ದೆಹಲಿ, ಮೇ 27 (DaijiworldNews/AA): ಮಧ್ಯಂತರ ಜಾಮೀನು ಅವಧಿ 7 ದಿನಗಳವರೆಗೆ ವಿಸ್ತರಿಸುವಂತೆ ಕೋರಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಅಬಕಾರಿ ನೀತಿ ಹಗರಣದಲ್ಲಿ ಪ್ರಮುಖ ಆರೋಪಿ ಎನ್ನವ ಆರೋಪದ ಮೇರೆಗೆ ಜೈಲು ಪಾಲಾಗಿದ್ದ ಕೇಜ್ರಿವಾಲ್ ಅವರಿಗೆ ಇತ್ತೀಚೆಗೆ ಮಧ್ಯಂತರ ಜಾಮೀನು ಮಂಜೂರಾಗಿತ್ತು. ಇದೀಗ ಕೇಜ್ರಿವಾಲ್ ಅವರು ತಮಗೆ ಗಂಭೀರವಾದ ಕಾಯಿಲೆ ಇದೆ. ಹೀಗಾಗಿ ಪಿಇಟಿ ಹಾಗೂ ಸಿಟಿ ಸ್ಕ್ಯಾನ್ ಮಾಡಬೇಕು. ಇದರಿಂದಾಗಿ 7 ದಿನಗಳ ಕಾಲ ಜಾಮೀನು ವಿಸ್ತರಿಸುವಂತೆ ಸುಪ್ರೀಂಗೆ ಮನವಿ ಮಾಡಿದ್ದಾರೆ.
ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿದೆ. ಹೀಗಾಗಿ ಅವರು ಜೂನ್ 2 ರಂದು ಮತ್ತೆ ತಿಹಾರ್ ಜೈಲಿಗೆ ತೆರಳಬೇಕಾಗಿದೆ. ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನದ ಒಂದು ದಿನದ ಬಳಿಕ ಜೂನ್ 2 ರಂದು ಅವರು ಜೈಲು ಪಾಲಾಗಬೇಕಿದೆ.