ನವದೆಹಲಿ, ಮೇ 28 (DaijiworldNews/AK): IAS ಅಧಿಕಾರಿ ಅನುದೀಪ್ ದುರಿಶೆಟ್ಟಿ ಅವರು 2017 ರಲ್ಲಿ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ (CSE) ಟಾಪ್ ಸ್ಕೋರರ್ ಮಾಡುವ ಮೂಲಕ ಇತಿಹಾಸವನ್ನು ಬರೆದರು. ಅವರ ಯಶಸ್ಸಿನ ಕಥೆ ತಿಳಿಯೋಣ
ಅನುದೀಪ್ BITS ಪಿಲಾನಿಯಲ್ಲಿ ಕಾಲೇಜು ಮುಗಿಸಿದ ಬಳಿಕ ಗೂಗಲ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದರು. ಆದರೆ ಈ ಕೆಲಸದಲ್ಲಿ ತೃಪ್ತ ಪಡೆಯದೇ ತನ್ನ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ನಿರ್ಧರಿಸಿದರು. ಕೈತುಂಬಾ ಸಂಬಳದ ಕೆಲಸವಿದ್ದರೂ ಕಷ್ಟದ ಹಾದಿಯನ್ನು ಆಯ್ದುಕೊಂಡರು. 2012 ರಲ್ಲಿ ಅವರ ಮೊದಲ ಪ್ರಯತ್ನ ಯಶಸ್ವಿಯಾಗಲಿಲ್ಲ, ಮತ್ತು ಅವರು 2013 ರಲ್ಲಿ ಭಾರತೀಯ ಕಂದಾಯ ಸೇವೆಗೆ (IRS) ಸೇರಿದರೂ, IAS ಅಧಿಕಾರಿಯಾಗಬೇಕೆಂಬ ಅವರ ಕನಸು ಮುಂದುವರೆಯಿತು.
ಅನುದೀಪ್ 2014 ಮತ್ತು 2015 ರಲ್ಲಿ UPSC CSE ಗೆ ಪ್ರಯತ್ನಿಸುವುದನ್ನು ಮುಂದುವರೆಸಿದರು. ವೈಫಲ್ಯಗಳಿಂದ ನಿರುತ್ಸಾಹಗೊಳ್ಳುವ ಬದಲು, ಅವರು ಹೆಚ್ಚು ದೃಢನಿರ್ಧಾರ ಮಾಡಿದರು. ಅಂತಿಮವಾಗಿ, 2017 ರಲ್ಲಿ, ತನ್ನ ಐದನೇ ಪ್ರಯತ್ನದಲ್ಲಿ, ಅನುದೀಪ್ ಐಎಎಸ್ ಅಧಿಕಾರಿಯಾದರು ಮಾತ್ರವಲ್ಲದೆ UPSC CSE 2017 ರಲ್ಲಿ 2,025 ರಲ್ಲಿ 1,126 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು.
ಅನುದೀಪ್ ಅವರ ಯಶಸ್ಸು ಕೇವಲ ಅವರ ಸ್ವಂತ ಪ್ರಯತ್ನದಿಂದಲ್ಲ ಆದರೆ ಅವರ ಕುಟುಂಬದಿಂದ ಅವರಿಗೆ ಸಿಕ್ಕಿದ ನಿರ್ಣಾಯಕ ಬೆಂಬಲದಿಂದ ಜಯ ಸಿಕ್ಕಿತ್ತು. ಹೈದರಾಬಾದ್ನ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಅನುದೀಪ್ ಅವರ ಕಥೆಯು ಇತರರನ್ನು ಪ್ರೇರೇಪಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.