ಬೆಂಗಳೂರು, ಮೇ 30 (DaijiworldNews/AK): ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಹೊಸಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ರೀತಿಯಲ್ಲಿ ಘಟನೆಗಳು ಆಗಿವೆ. ಆದರೆ ಹಿಂದಿನವರು ಏನು ಪಾಲನೆ ಮಾಡಿದ್ದರು, ಅದನ್ನು ಈಗಿನ ಸರ್ಕಾರವೂ ಮಾಡಬೇಕು. ಆದರೆ ಇದೊಂದು ಭಂಡ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರ ಸಾವಿನ ವಿಚಾರದಲ್ಲಿ ಈಶ್ವರಪ್ಪನವರದ್ದೇನು ತಪ್ಪಿರಲಿಲ್ಲ. ಆದರೂ ಈಶ್ವರಪ್ಪನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಈಶ್ವರಪ್ಪ ಅವರ ವಿಚಾರದಲ್ಲಿ ವಿಪಕ್ಷ ನಾಯಕರಿದ್ದ ಸಿದ್ದರಾಮಯ್ಯನವರು ಮಾಡಿದ ರೋಷಾವೇಶ ಈಗ ಯಾಕೆ ಇಲ್ಲಾ? ಈಗ ಅವರೇ ಸಿಎಂ. ಅವರ ಸಚಿವ ಸಂಪುಟದ ಸಚಿವರ ವ್ಯಾಪ್ತಿಯ ವಾಲ್ಮೀಕಿ ನಿಗಮದಲ್ಲಿ ಹಣ ಲೂಟಿ ಆಗಿದೆ. 14 ಅಕೌಂಟ್ಗಳ ಮೂಲಕ ಹಗಲು ದರೋಡೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧಿಕಾರಿ ಡೆತ್ನೋಟ್ನಲ್ಲಿ ಎರಡು ಬಾರಿ ಸಚಿವ ನಾಗೇಂದ್ರ ಅವರ ಮೌಖಿಕ ಆದೇಶ ಇತ್ತು ಎಂದು ಉಲ್ಲೇಖ ಮಾಡಿದ್ದಾರೆ.