ಬೆಂಗಳೂರು,ಮೆ09(DaijiworldNews/AZM):ಮೇ 29ರಂದು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದ್ದು,ಈ ಬಗ್ಗೆ ಅಧಿಸೂಚನೆ ಇಂದು ಹೊರ ಬೀಳಲಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 16 ಕೊನೆ ದಿನವಾಗಿದ್ದು,ಮೇ 29 ಕ್ಕೆ ಚುನಾವಣೆ ನಡೆದು ಮೇ 31ಕ್ಕೆ ಮತ ಎಣಿಕೆ ನಡೆಯಲಿದೆ ಹಾಗೂ ಅಂದೇ ಫಲಿತಾಂಶ ಹೊರ ಬೀಳುವ ನಿರೀಕ್ಷೆ ಇದೆ.
ರಾಜ್ಯದ ಒಟ್ಟು 63 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದ್ದು, ಇವುಗಳಲ್ಲಿ 8 ನಗರಸಭೆ, 33 ಪುರಸಭೆ, 22 ಪಟ್ಟಣ ಪಂಚಾಯಿತಿಗಳು ಸೇರಿವೆ. ಚುನಾವಣಾ ವೆಚ್ಚವನ್ನು ನಿಗದಿಪಡಿಸಲಾಗಿದ್ದು, ನಗರಸಭೆ ಅಭ್ಯರ್ಥಿಗಳು 2 ಲಕ್ಷ ರೂ., ಪುರಸಭೆ ಅಭ್ಯರ್ಥಿಗಳು 1.5 ಲಕ್ಷ ರೂ., ಪಟ್ಟಣ ಪಂಚಾಯಿತಿ ಅಭ್ಯರ್ಥಿಗಳು 1 ಲಕ್ಷ ರೂ., ಬಿಬಿಎಂಪಿಯಲ್ಲಿ 5 ಲಕ್ಷ ರೂ. ಹಾಗೂ ಇತರೆ ಪಾಲಿಕೆಗಳಲ್ಲಿ 3 ಲಕ್ಷ ರೂ. ವೆಚ್ಚ ಮಾಡಬಹುದಾಗಿದೆ.