ನವದೆಹಲಿ,ಮೆ09(DaijiworldNews/AZM): ಮೋದಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಮತ್ತೊಂದು ಕ್ವಿಟ್ ಇಂಡಿಯಾ ರೀತಿಯ ಚಳುವಳಿ ಅಗತ್ಯವೆಂದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಈ ಕುರಿತು ಡೆಬ್ರಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮಮತಾ, 1942 ರಲ್ಲಿ, ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿಯನ್ನು ಪ್ರಾರಂಭಿಸಿದಂತೆ, ಈಗ ನಾವು ಫ್ಯಾಸಿಸ್ಟ್ ಮೋದಿಯವರನ್ನು ಅಧಿಕಾರದಿಂದ ಕಿತ್ತೊಗೆಯಲು ನಾವು ಹೋರಾಡುತ್ತಿದ್ದೇವೆ. "ದೇಶದಲ್ಲಿ ತುರ್ತುಪರಿಸ್ಥಿತಿ ಇದೆ. ಸಾರ್ವಜನಿಕವಾಗಿ ಮಾತನಾಡಲು ಈಗ ಜನರು ಹೆದರುತ್ತಿದ್ದಾರೆ.
ಆದ್ದರಿಂದ ಈ ಫ್ಯಾಸಿಸಂ ಮತ್ತು ಭಯೋತ್ಪಾದನೆಗೆ ತಡೆಯೊಡ್ಡಬೇಕಾಗಿದೆ" ಹಾಗಾಗಿ ಯಾರಾದರೂ ಒಬ್ಬರು ಬೆಕ್ಕಿಗೆ ಗಂಟೆ ಕಟ್ಟಬೇಕಿದೆ ಎಂದರು.