ದೆಹಲಿ,ಜೂ 01(DaijiworldNews/AA): ಲೋಕಸಭೆಗೆ ನಡೆದ ಚುನಾವಣೆಯ ಏಳು ಹಂತಗಳ ಮತದಾನ ಕೊನೆಗೊಂಡಿದ್ದು ಇದೀಗ ಎಕ್ಸಿಟ್ ಪೋಲ್ ಪ್ರಕಟವಾಗುತ್ತಿದೆ. ಇಂಡಿಯಾ ಟುಡೇ, ಮ್ಯಾಟ್ರಿಜ್, ರಿಪಬ್ಲಿಕ್ ಟಿವಿ, ಪಿಎಂಎಆರ್ಕ್ಯೂ, ಲೋಕ್ಪೋಲ್, ಜನ್ಕೀ ಬಾತ್, ಪಿ ಮಾರ್ಕ್, ಇಂಡಿಯಾ ನ್ಯೂಸ್ ಸೇರಿದಂತೆ ಅನೇಕ ಸಂಸ್ಥೆಗಳು ಮತಗಟ್ಟೆ ಸಮೀಕ್ಷೆ ನಡೆಸಿವೆ.
ರಿಪಬ್ಲಿಕ್ ಟಿವಿ, ಪಿಎಂಎಆರ್ಕ್ಯೂ ಮತದಾನೋತ್ತರ ಸಮೀಕ್ಷೆಯಂತೆ ಬಿಜೆಪಿ 359 ಸ್ಥಾನವನ್ನು, ಇಂಡಿಯಾ ಮೈತ್ರಿಕೂಟ 154 ಸ್ಥಾನವನ್ನು ಗಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಇತರರಿಗೆ 30 ಸ್ಥಾನ ದೊರೆಯಲಿದೆ ಎಂದು ಘೋಷಿಸಲಾಗಿದೆ.
ಲೋಕ್ಪೋಲ್ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ಎನ್ಡಿಎ 325 ರಿಂದ 335 ಸ್ಥಾನ, ಇಂಡಿಯಾ ಮೈತ್ರಿಕೂಟ 155-165 ಸ್ಥಾನ, ಹಾಗೂ ಇತರರಿಗೆ 48-55 ಸ್ಥಾನ ಗಳಿಸಲಿದೆ ಎಂದು ಹೇಳಲಾಗಿದೆ.
ಜನ್ಕೀ ಬಾತ್ ಮತದಾನೋತ್ತರ ಸಮೀಕ್ಷೆಯಲ್ಲಿ ಎನ್ಡಿಎಗೆ 377 ಸ್ಥಾನ, ಇಂಡಿಯಾಗೆ 151 ಸ್ಥಾನ, ಇತರರಿಗೆ 15 ಸ್ಥಾನ ಸಿಗಲಿದೆ ಎಂದು ಘೋಷಿಸಲಾಗಿದೆ.
ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಅನುಸಾರ ಎನ್ಡಿಎ 353 ರಿಂದ 368 ಸ್ಥಾನವನ್ನು, ಇಂಡಿಯಾ ಮೈತ್ರಿಕೂಟ 118-133 ಸ್ಥಾನವನ್ನು, ಇತರರು 43-48 ಸ್ಥಾನವನ್ನು ಗಳಿಸಲಿದೆ ಎಂದು ಪ್ರಕಟಿಸಿದೆ.
ಇನ್ನು ಇಂಡಿಯಾ ನ್ಯೂಸ್ ಮತದಾನೋತ್ತರ ಸಮೀಕ್ಷೆಯಲ್ಲಿ ಎನ್ಡಿಎಗೆ 371 ಸ್ಥಾನ, ಇಂಡಿಯಾಗೆ 125, ಹಾಗೂ ಇತರರಿಗೆ 47 ಸ್ಥಾನ ದೊರೆಯಲಿದೆ ಎಂದು ಹೇಳಲಾಗಿದೆ.