ಬೆಂಗಳೂರು,ಮೆ09(DaijiworldNews/AZM) : ಇಂದು ಸಮ್ಮಿಶ್ರ ಸರ್ಕಾರದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು,ವಿವಿಧ ತುರ್ತು ಕಾಮಗಾರಿಗಳಿಗೆ ಅನುಮೋದನೆ ನೀಡುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಬರಗಾಲ ತಲೆದೋರಿದ ಹಿನ್ನಲೆ ಮೊದಲಿಗೆ ಬರ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳುವ ಸಾಧ್ಯತೆ ಇದೆ. ಇನ್ನು ತುರ್ತು ಕಾಮಗಾರಿಗಳಿಗೆ ಚುನಾವಣಾ ನೀತಿ ಸಂಹಿತೆ ಸಡಿಲಿಸಿ ಆಯೋಗ ಅನುಮತಿ ನೀಡಿದ ಹಿನ್ನಲೆ ಸಂಪುಟಕ್ಕೆ ಅನುಮೋದನೆ ನೀಡಲು ಅಧಿಕಾರವಿದೆ. ಗ್ರಾಮೀಣಾಭಿವೃದ್ಧಿ, ಕಂದಾಯ, ಡಿಪಿಎಆರ್ ಗೆ ಸಂಬಂಧಿಸಿದ ಇಲಾಖೆಗಳ ಬಗ್ಗೆ ಸೇರಿ ಒಟ್ಟಾರೆ 52 ವಿಷಯಗಳ ಬಗ್ಗೆ ಚರ್ಚೆ ನಡೆಸಿ ಹಲವು ನಿರ್ಧಾರಗಳನ್ನು ಪೆಂಡಿಂಗ್ ಇಡುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೇಲೆ ಈಗ ಕೆಲ ಸಚಿವರು ಅಸಮಧಾನಗೊಂಡಿದ್ದು, ಹೀಗಾಗಿ ಕೆಲ ಸಚಿವರ ಜೊತೆ ಅವರ ಖಾತೆಗೆ ಸಂಬಂಧಿಸಿದಂತೆ ವಿಚಾರದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.