ಕಾಸರಗೋಡು,ಮೇ 09 (Daijiworld News/MSP): ಕೇರಳದಲ್ಲಿ ಉಗ್ರಗಾಮಿ ಚಟುವಟಿಕೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಕಣ್ಣೂರು ಮರಕ್ಕಾರ್ಕಂಡಿ ನಿವಾಸಿ ಕೊಚ್ಚುಪಿಡಿಯಾಕಲ್ ಮೊಹಮ್ಮದ್ ಸಾಬೀರ್ ಯಾನೆ ಅಯೂಬ್ ಪಾಕಿಸ್ತಾನದಲ್ಲಿದ್ದು , ಆತನಿಗೆ ಪಾಸ್ ಪೋರ್ಟ್ ನೀಡಿ ಸಂರಕ್ಷಿಸುತ್ತಿದೆ ಎಂದು ರಾಷ್ಟ್ರೀಯ ತನಿಖಾ ತಂಡ ತಿಳಿಸಿದೆ.
ಮೊಹಮ್ಮದ್ ಸಾಬೀರ್ ವರ್ಷಗಳ ಹಿಂದೆಯೇ ಕೇರಳದಿಂದ ದುಬೈಗೆ ಪರಾರಿಯಾಗಿ ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕೆ ನ್ಯಾಯಾಲಯ ವಾರೆಂಟ್ ಹೊರಡಿಸಿತ್ತು. ಈ ಹಿನ್ನಲೆಯಲ್ಲಿ ಎನ್ ಐ ಎ ತನಿಖೆ ನಡೆದಿದಾಗ ಆತ ಪಾಕಿಸ್ಥಾನದ ರಾವಲ್ಪಿಂಡಿಯಲ್ಲಿರುವುದಾಗಿ ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ಇಂಟರ್ ಪೋಲ್ ಮುಖಾಂತರ ಬಂಧಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಎನ್ ಐ ಎ ತಿಳಿಸಿದೆ.