ಮುಂಬೈ, ಜೂ 04(DaijiworldNews/ AK): ಭಾರತೀಯ ಷೇರು ಮಾರುಕಟ್ಟೆಯಲ್ಲಿಆರಂಭಿಕ ಭಾರೀ ಕುಸಿತ ಕಂಡಿದೆ. ಸೆನ್ಸೆಕ್ಸ್ 1,600 ಪಾಯಿಂಟ್ ಹಾಗೂ ನಿಫ್ಟಿ 500 ಪಾಯಿಂಟ್ ಕುಸಿತವಾಗಿದೆ.
ಲೋಕಸಭಾ ಚುನಾವಣೆಯ ಮತಎಣಿಕೆ ಮುಂದುವರಿದಿದ್ದು, ಈಗಿನ ಟ್ರೆಂಡ್ ಪ್ರಕಾರ ಭಾರತೀಯ ಜನತಾ ಪಕ್ಷ 249 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಎನ್ ಡಿಎ ಮೈತ್ರಿಕೂಟ 305ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇಂಡಿಯಾ ಮೈತ್ರಿಕೂಟ 216 ಸ್ಥಾನಗಳಲ್ಲಿ ಮುನ್ನಡೆ ಕಂಡಿದೆ.
ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು ಬೆಳಿಗ್ಗೆ 9:15 ರ ಹೊತ್ತಿಗೆ 2.2% ರಷ್ಟು ಕುಸಿದು 22,779 ಕ್ಕೆ ತಲುಪಿದೆ. ಬಿಎಸ್ಇ ಸೆನ್ಸೆಕ್ಸ್ ಶೇ.1.8 ರಷ್ಟು ಕುಸಿದು (75,163) ಕ್ಕೆ ತಲುಪಿದೆ. ಸೋಮವಾರದಂದು ಬೆಂಚ್ಮಾರ್ಕ್ಗಳು 3% ಕ್ಕಿಂತ ಹೆಚ್ಚು ಜಿಗಿದಿತ್ತು. ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು. ಬಿಜೆಪಿ ನೇತೃತ್ವದ ಮೈತ್ರಿಕೂಟವು ಮೂರನೇ ಎರಡರಷ್ಟು ಬಹುಮತ ಪಡೆಯಲಿದೆ ಎಂದು ಅಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿದ್ದವು.
ಸನ್ ಫಾರ್ಮಾ ಮತ್ತು ನೆಸ್ಲೆ ಮಾತ್ರ ಲಾಭ ಗಳಿಸಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಸೋಮವಾರ 6,850.76 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎನ್ನಲಾಗಿದೆ.ಏಷ್ಯಾದ ಮಾರುಕಟ್ಟೆಗಳಲ್ಲಿ ಸಿಯೋಲ್, ಟೋಕಿಯೊ ಮತ್ತು ಶಾಂಘೈ ಕಡಿಮೆ ವಹಿವಾಟು ನಡೆಸುತ್ತಿದ್ದರೆ, ಹಾಂಗ್ ಕಾಂಗ್ ಲಾಭದೊಂದಿಗೆ ವಹಿವಾಟು ನಡೆಸಿತು.