ಲಖನೌ, ಜೂ. 05(DaijiworldNews/AK): ಮುಸ್ಲಿಂ ಸಮುದಾಯದವರಿಗೆ ತಮ್ಮ ಪಕ್ಷವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದಾರೆ ಎಂದು ಲೋಕಸಭಾ ಚುನಾವಣೆ ಸೋಲಿನ ಬಳಿಕ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಅಸಮಾಧಾನ ಹೊರಹಾಕಿದ್ದಾರೆ.
ಫಲಿತಾಂಶದ ಕುರಿತು ಮಾತನಾಡಿದ ಅವರು, ‘ಇನ್ನು ಮುಂದೆ ಮುಸ್ಲಿಮರನ್ನು ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಸುವ ಮುನ್ನ ಸಾಕಷ್ಟು ಆಲೋಚಿಸಬೇಕಾಗುತ್ತದೆ ಎಂದೂ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಉಳಿದ ಪಕ್ಷಗಳಿಗಿಂ ತ ಅತ್ಯಧಿಕವಾದ 35 ಅಭ್ಯರ್ಥಿ ಗಳನ್ನು ಕಣಕ್ಕೆ ಇಳಿಸಿತ್ತು. ‘ಮುಸ್ಲಿಮರಿಗೆ ಉತ್ತಮ ಪ್ರಾತಿನಿಧ್ಯ ನೀ ಡಿದ ಹೊರತಾಗಿಯೂ ಆ ಸಮುದಾಯದ ಮತದಾರರು ಬಿಎಸ್ಪಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ದಲಿತರು, ಅದರಲ್ಲೂ ಜಾಟವ ಸಮುದಾಯದವರು ಉತ್ತಮ
ರೀತಿಯಲ್ಲಿ ಸ್ಪಂದಿಸಿದರು ಅವರಿಗೆ ಕೃತಜ್ಞಳಾಗಿದ್ದೇ ನೆ ಎಂದರು.
ಬಿಸಿಲು ಹೆಚ್ಚಾಗಿರುವ ಸಂದರ್ಭ ದಲ್ಲಿ ಹಾಗೂ ಏಳು ಹಂತಗಳಲ್ಲಿ ಮತದಾನ ನಡೆಸುವ ಕ್ರಮ ಸರಿಯಲ್ಲ ಎಂದು ಅಭಿಪ್ರಾಯಪಟ್ಟ ಅವರು,ಮೂರ್ನಾ ಲ್ಕು ಹಂತಗಳಲ್ಲೇಮತದಾನ ನಡೆಯಲು ಅವಕಾಶ ನೀಡಬೇಕು ಎಂದರು.