ನವದೆಹಲಿ, ಜೂ. 10 (DaijiworldNews/AK): ಹೊಸ ಸರ್ಕಾರದ ನಾಯಕರಾಗಿರುವ ನರೇಂದ್ರ ಮೋದಿ ಅವರು ಭಾನುವಾರ ಪ್ರಧಾನಿಯಾಗಿ ಪ್ರಮಾಣವಚನ ಸ್ವೀ ಕರಿಸಿದ್ದರು. ಇಂದು ಸೋಮವಾರ ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಮೋದಿ ಆರಂಭಿಸಿದ್ದಾರೆ. ಮೊದಲ ದಿನವೇ ಪಿಎಂ ಕಿಸಾನ್ ನಿಧಿಯ ಅನುದಾನ ಬಿಡುಗಡೆ ಕಡತಕ್ಕೆ ಸಹಿ ಹಾಕಿರುವುದಾಗಿ ವರದಿಯಾಗಿದೆ.
ಪ್ರಮಾಣ ವಚನ ಸ್ವೀ ಕರಿಸಿದ ಬಳಿಕ ಸಚಿವರ ಜತೆಗಿನ ಸಂಪುಟ ಸಭೆ ನಡೆಸುವುದು ಪ್ರಧಾನಿ ಮೋದಿ ಅವರ ತಕ್ಷಣದ ಆದ್ಯತೆಯಾಗಿದೆ. ಅಲ್ಲದೇ ಶೀಘ್ರವೇ ಲೋಕಸಭೆ ಕಲಾಪ ಕರೆಯುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಲ್ಲಿ ಮನವಿ ಸಲ್ಲಿಸುವುದು ಕ್ಯಾಬಿನೆಟ್ ನಿರೀಕ್ಷೆಯಾಗಿದೆ.ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇ ಶಿಸಿ ಮಾತನಾಡಲಿದ್ದು , ಮುಂಬರುವ ವರ್ಷಗಳಲ್ಲಿನ ಕೇಂದ್ರ ಸರ್ಕಾರದ ಅಭಿವೃದ್ಧಿ, ಆದ್ಯತೆಗಳ ಬಗ್ಗೆ ವಿವರ ನೀಡಲಿದ್ದಾರೆ.
ಭಾನುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಪ್ರಧಾನಿ ಮೋದಿ ಹಾಗೂ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.