ಜೈಪುರ್, ಜೂ 13 (DaijiworldNews/ AK): ಶ್ರೀರಾಮನ ಬಗ್ಗೆ ಭಕ್ತಿ ತೋರಿಸಿದ ಬಿಜೆಪಿಗರು ಕ್ರಮೇಣ ದುರಹಂಕಾರಿಗಳಾಗಿ ಬದಲಾದರು. ಇದಕ್ಕೆ ಶ್ರೀರಾಮ ಅವರನ್ನು 241 ಸ್ಥಾನಕ್ಕೆ ನಿಲ್ಲಿಸಿದ ಎಂದು ಬಿಜೆಪಿ ವಿರುದ್ಧ ಆರ್ಎಸ್ಎಸ್ ನಾಯಕ ಇಂದ್ರೇಶ್ ಕುಮಾರ್ ಹರಿಹಾಯ್ದಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಬಹುಮತ ಸಿಗದ ವಿಚಾರವಾಗಿ ಅವರು ಪ್ರತಿಕ್ರಿಸಿದ ಅವರು,ಇದೇ ವೇಳೆ ಇಂಡಿಯಾ ಮೈತ್ರಿಕೂಟದ ವಿರುದ್ಧ ಸಹ ಅವರು ವಾಗ್ದಾಳಿ ನಡೆಸಿದ್ದಾರೆ. ಪ್ರತಿಪಕ್ಷಗಳ ಮೈತ್ರಿಕೂಟದ ಹೆಸರನ್ನು ಉಲ್ಲೇಖಿಸದೇ ಪರೋಕ್ಷವಾಗಿ ರಾಮ ವಿರೋಧಿ ಎಂದು ಕರೆದ ಅವರು, ರಾಮನ ಮೇಲೆ ನಂಬಿಕೆಯಿಲ್ಲದವರನ್ನು 234 ಸ್ಥಾನಗಳಿಗೆ ನಿಲ್ಲಿಸಲಾಯಿತು. ದೇವರ ಈ ನ್ಯಾಯ ಸಂತೋಷ ತಂದಿದೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಾರ್ವಜನಿಕ ಸೇವೆಯಲ್ಲಿ ಘನತೆ ಹಾಗೂ ಮಾನವೀಯತೆಯನ್ನು ಕಾಪಾಡಿಕೊಳ್ಳಬೇಕು ಎಂದಿದ್ದರು. ಇದಾದ ಬಳಿಕ ನಿದೀಗ ಇಂದ್ರೇಶ್ ಕುಮಾರ್ ಅವರು ಈ ಮಾತುಗಳನ್ನ ಹೇಳಿದ್ದಾರೆ.