ಉತ್ತರ ಪ್ರದೇಶ, ಜೂ 15 (DaijiworldNews/AK): ಉತ್ತರ ಪ್ರದೇಶದ ನಿವಾಸಿ ಇಶಿತಾ ರಾಠಿ ಅವರ ಕುಟುಂಬದಲ್ಲಿ ತಂದೆ- ತಾಯಿಯಿಂದ ಹಿಡಿದು ಬಹುತೇಕ ಮಂದಿ ಸರ್ಕಾರಿ ಹುದ್ದೆಗಳಲ್ಲಿ ಇರುವವರೇ. ಇದರ ಪ್ರಭಾವದಿಂದ ಇಶಿತಾ ಕೂಡ ಕಠಿಣ ಪರೀಕ್ಷೆಯನ್ನು ಯಾವುದೇ ಕೋಚಿಂಗ್ ಇಲ್ಲದೇ ಪಾಸ್ ಮಾಡಿದ್ದಾರೆ. ಅವರ ಸಕ್ಸಸ್ ಸ್ಟೋರಿ ಇಲ್ಲಿದೆ.
ಐಎಎಸ್ ಇಶಿತಾ ರಾಠಿ ಉತ್ತರ ಪ್ರದೇಶದ ಬಾಗ್ ಪತ್ ಜಿಲ್ಲೆಯ ನಿವಾಸಿ. ಇಶಿತಾ ಅವರು ಯುಪಿ ನಿವಾಸಿಯಾಗಿದ್ದರು, ಓದಿದ್ದು ದೆಹಲಿಯಲ್ಲಿ. ಅವರ ತಾಯಿ ಮೀನಾಕ್ಷಿ ರಾಠಿ ದೆಹಲಿ ಪೊಲೀಸ್ ನಲ್ಲಿ ASI ಮತ್ತು ತಂದೆ ಐಎಸ್ ರಾಠಿ ಹೆಡ್ ಕಾನ್ಸ್ಟೆಬಲ್ ಆಗಿದ್ದಾರೆ.ಇನ್ನು ಇಶಿತಾ ಅವರ ಚಿಕ್ಕಪ್ಪ ಸಿಬಿಐನಲ್ಲಿದ್ದಾರೆ. ಇಶಿತಾ ಅವರ ಸಹೋದರ ಕೂಡ UPSC ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಇಶಿತಾ ರಾಠಿ ದೆಹಲಿಯ ಡಿಎವಿ ಪಬ್ಲಿಕ್ ಸ್ಕೂಲ್ ವಸಂತ್ ಕುಂಜ್ ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಇದಾದ ನಂತರ ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಆನರ್ಸ್ ಓದಿದ್ದಾರೆ. ಮದ್ರಾಸ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಇಶಿತಾ ರಾಠಿ ಯುಪಿಎಸ್ ಸಿ ಪರೀಕ್ಷೆಯ ಮೂರನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಸಿವಿಲ್ ಸರ್ವೀಸಸ್ ಪರೀಕ್ಷೆಯ ತಯಾರಿಗಾಗಿ ಅವರು ಯಾವುದೇ ಕೋಚಿಂಗ್ ತೆಗೆದುಕೊಂಡಿಲ್ಲ. ಎರಡು ಬಾರಿ ಅನುತ್ತೀರ್ಣಳಾದ ನಂತರ, 2021 ರಲ್ಲಿ 8 ನೇ ರ್ಯಾಂಕ್ ಪಡೆದರು.
ಕೋಚಿಂಗ್ ನ ಸಹಾಯ ಪಡೆಯದೆ ಸ್ವಂತವಾಗಿ ತಯಾರಿ ನಡೆಸಬಹುದು ಎಂದು ಮನಗಂಡ ಆಕೆ ಅದಕ್ಕೆ ತಕ್ಕಂತೆ ಅಧ್ಯಯನ ನಡೆಸಿ ಯಶಸ್ಸು ಕಂಡರು.