ಬೆಂಗಳೂರು, ಜೂ. 16(DaijiworldNews/AA): ರೇಣುಕಾಸ್ವಾಮಿ ಹತ್ಯೆ ನಡೆಸಿದ್ದ ಡಿ ಗ್ಯಾಂಗ್, ಶವ ಎಸೆಯುವ ಕುರಿತು ನಟ ದರ್ಶನ್ ಮನೆಯಲ್ಲೇ ಸ್ಕೆಚ್ ಹಾಕಿದ್ದ ವಿಷಯ ಪೊಲೀಸರ ತನಿಖೆ ವೇಳೆ ಬಹಿರಂಗವಾಗಿದೆ.
ರೇಣುಕಾಸ್ವಾಮಿ ಮೇಲೆ ಆರೋಪಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿದ ಬಳಿಕ ಆತ ಸಾವನ್ನಪ್ಪಿದ್ದು, ಆ ನಂತರ ಆರೋಪಿಗಳು ಗಾಬರಿಗೊಂಡಿದ್ದಾರೆ. ಈ ಸಂದರ್ಭ ಶೆಡ್ ಬಳಿ ಬಂದು ರೇಣುಕಾಸ್ವಾಮಿ ಸಾವನ್ನಪ್ಪಿರುವುದನ್ನು ನೋಡಿದ್ದ ದರ್ಶನ್ ಶವ ಎಸೆಯುವ ಬಗ್ಗೆ ಪ್ಲ್ಯಾನ್ ಮಾಡುವಂತೆ ಹೇಳಿ ಅಲ್ಲಿಂದ ತೆರಳಿದ್ದರು. ಇದಾದ ಕೆಲ ಸಮಯದ ಬಳಿಕ ಆರೋಪಿ ವಿನಯ್ ಹಾಗೂ ಗ್ಯಾಂಗ್ ಆಆರ್ ನಗರದ ದರ್ಶನ್ ಅವರ ಐಡಿಯಲ್ ಹೋಂನಲ್ಲಿ ಶವ ಎಸೆಯುವ ಕುರಿತು ಚರ್ಚೆ ನಡೆಸಿದ್ದರು.
ಇದೇ ಸಂದರ್ಭ ತನ್ನ ಹೆಸರು ಬಾರದಂತೆ ಹಾಗೂ ಶವ ಎಸೆಯುವಂತೆ ನಟ ದರ್ಶನ್ 30 ಲಕ್ಷಕ್ಕೆ ನೀಡಿದ್ದರು. ಬಳಿಕ ರೇಣುಕಾಸ್ವಾಮಿ ಮೃತದೇಹವನ್ನು ಸುಮ್ಮನಹಳ್ಳಿಯ ಮೋರಿ ಬಳಿ ಎಸೆದು, ಬಳಿಕ ಮೈಸೂರಿಗೆ ದರ್ಶನ್ ತೆರಳಿದ್ದರು. ಇತ್ತ ಆರೋಪಿಗಳು ಕೂಡ ಮೈಸೂರಿಗೆ ತೆರಳಿ ದರ್ಶನ್ ಭೇಟಿ ಮಾಡಿದ್ದರು. ಈ ಭೇಟಿ ವೇಳೆ ಮುಂದಿನ ಪ್ಲಾನ್ ಬಗ್ಗೆ ಚರ್ಚಿಸಿದ್ದರು ಎಂಬ ವಿಚಾರ ತನಿಖೆ ಬೆಳಕಿಗೆ ಬಂದಿದೆ.