ಬೆಂಗಳೂರು, ಜೂ. 18(DaijiworldNews/AK): ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹಣ ಬೇಕು ಎಂಬ ಕಾರಣಕ್ಕೆ ತೈಲ ದರ ಹೆಚ್ಚಳ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಎಷ್ಟು ಬಾರಿ ತೈಲ ಬೆಲೆ ಏರಿಕೆ ಮಾಡಿತ್ತು ಎಂದು ಅವರು ಯೋಚನೆ ಮಾಡಬೇಕು. ಬಿಜೆಪಿ ಬಾರಿ ಬೆಲೆ ಏರಿಕೆ ಮಾಡಿತ್ತು. ಪಕ್ಕದ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ, ಈಗಲೂ ಕರ್ನಾಟಕದಲ್ಲಿ ಬೆಲೆ ಕಡಿಮೆಯೇ ಇದೆ. ಬೇರೆ ರಾಜ್ಯದಲ್ಲಿ ಬೆಲೆ ಇನ್ನೂ ಹೆಚ್ಚಿದೆ. ಗ್ಯಾರಂಟಿಯಿಂದಾಗಿ ಬೆಲೆ ಏರಿಕೆ ಮಾಡಿಲ್ಲ. ಸಮಯಕ್ಕೆ ತಕ್ಕನಾಗಿ ಬೆಲೆ ಏರಿಕೆ ಮಾಡಬೇಕಿದೆ ಎಂದು ಹೇಳಿದರು
ನಮ್ಮ ರಾಜ್ಯದಲ್ಲಿ ಸಂಪನ್ಮೂಲಗಳ ಕ್ರೂಢೀಕರಣ ಆಗಬೇಕಿದೆ. ಅದಕ್ಕಾಗಿ ಬೆಲೆ ಏರಿಕೆ ಮಾಡಲಾಗಿದೆ. ಗ್ಯಾರಂಟಿಗೊಸ್ಕರ ಬೆಲೆ ಏರಿಕೆ ಮಾಡಿದ್ದಾರೆ ಎಂದು ಹೇಳುವುದು ಸರಿಯಲ್ಲ. ನಾವು ಇಷ್ಟ ಬಂದ ಹಾಗೆ ತೈಲ ಬೆಲೆ ಏರಿಸಿಲ್ಲ. ಅಭಿವೃದ್ಧಿ ಮಾಡಲು ಹೆಚ್ಚು ಹಣ ಬೇಕು. ಅದಕ್ಕಾಗಿ ಮಾತ್ರ ಬೆಲೆ ಏರಿಕೆ ಮಾಡಿದ್ದೇವೆ ಎಂದು ತಿಳಿಸಿದರು.