ತಮಿಳುನಾಡು, ಜೂ. 18(DaijiworldNews/AK): ಸತತ ಸೋಲುಗಳ ಬಳಿಕ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ಸು ಕಂಡ ರಮ್ಯಾ ಅವರ ಸಕ್ಸಸ್ ಸ್ಟೋರಿ ಇಲ್ಲಿದೆ.
ರಮ್ಯಾ ಆರನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಉತ್ತೀರ್ಣರಾದವರು. 2021 ರಲ್ಲಿ ಯುಪಿಎಸ್ ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ AIR 46 ಗಳಿಸಿದ IAS ರಮ್ಯಾ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯವರು. ರಾಜ್ಯ ಮಟ್ಟದಲ್ಲಿ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. ರಮ್ಯಾ ಅವರು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ (ಇಇಇ) ನಲ್ಲಿ ಪದವಿ ಪಡೆದಿದ್ದಾರೆ.
ಕೊಯಮತ್ತೂರು ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದ್ದಿದ್ದಾರೆ. ನಂತರ ರಮ್ಯಾ ಇಗ್ನೋದಲ್ಲಿ ಎಂಬಿಎ ಮುಗಿಸಿದರು. ಐಎಎಸ್ ಅಧಿಕಾರಿ ಆಗಬೇಕು ಎಂಬುವು ಅವರ ಕನಸ್ಸಾಗಿತ್ತು. ಅದಕ್ಕಾಗಿ ತಯಾರಿ ಆರಂಭಿಸಿದರು.
ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಸಂಪೂರ್ಣ ಸಮರ್ಪಣಾ ಭಾವದಿಂದ ತಯಾರಿ ನಡೆಸಿದರೂ, ಅವರು ಉತ್ತೀರ್ಣರಾಗಲಿಲ್ಲ. ಛಲ ಬಿಡದೆ ಆರನೇ ಪ್ರಯತ್ನದವರೆಗೂ ಪರೀಕ್ಷೆ ನೀಡುವ ಉತ್ಸಾಹವನ್ನು ಉಳಿಸಿಕೊಂಡರು. ಅಂತಿಮವಾಗಿ ರಮ್ಯಾ 6ನೇ ಪ್ರಯತ್ನದಲ್ಲಿ ಯಶಸ್ಸನ್ನು ಪಡೆದರು.
ಸೋಲುಗಳಿಂದ ಕಂಗೆಡದೆ, ಬೇರೆಯವರ ಚುಚ್ಚು ಮಾತುಗಳಿಗೆ ಬೆಲೆ ಕೊಡದೆ ನಮ್ಮ ಗುರಿಯತ್ತ ನಾವು ಸಾಗಬೇಕು. ಆಗಲೇ ಯಶಸ್ಸು ಸಿಗುತ್ತದೆ ಎಂಬುವುದಕ್ಕೆ ಐಎಎಸ್ ಅಧಿಕಾರಿ ರಮ್ಯಾ ಉತ್ತಮ ಉದಾಹರಣೆ.