ಪಾಟ್ನಾ, ಜೂ. 18(DaijiworldNews/AK): 12 ಕೋಟಿ ರೂ. ವೆಚ್ಚದಲ್ಲಿ ಬಿಹಾರದ ಅರಾರಿಯಾದಲ್ಲಿ ಬಕ್ರಾ ನದಿಗೆ ನಿರ್ಮಿಸಲಾಗಿದ್ದ ಸೇತುವೆಯು ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದಿದೆ.
ಸೇತುವೆ ಕುಸಿದು ಬಿದ್ದಿರುವ ವೀಡಿಯೋವನ್ನು ಸಾರ್ವಜನಿಕರು ಸೆರೆಹಿಡಿದಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ಸೇತುವೆ ಒಂದು ಬದಿಗೆ ವಾಲಿರುವುದನ್ನು ತೋರಿಸುತ್ತದೆ. ಈ ವೇಳೆ ಸೇತುವೆಯ ಬಳಿ ನದಿಯ ದಡದಲ್ಲಿ ನಿಂತಿದ್ದ ಜನ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಕುಸಿದ ಸೇತುವೆಯ ಭಾಗವು ಕೆಲವೇ ಕ್ಷಣಗಳಲ್ಲಿ ಕೊಚ್ಚಿಕೊಂಡು ಹೋಯಿತು. ಈ ಘಟನೆಯಲ್ಲಿ ಸದ್ಯ ಯಾವುದೇ ಜೀವ ಹಾನಿಯಾದ ಬಗ್ಗೆ ವರದಿಯಾಗಿಲ್ಲ.