ಉತ್ತರಾಖಂಡ, ಜೂ. 19(DaijiworldNews/AK): ಮದುವೆ ಸಂಭ್ರಮದಲ್ಲಿರುವಾಗಲೇ ವಿಧಿ ವಿಪರ್ಯಾಸವೆಂಬಂತೆ ಕೊನೆ ಉಸಿರೆಳೆದಿದ್ದಾಳೆ. ಮದುವೆಯ ಹಿಂದಿನ ದಿನ ತನ್ನ ಮೆಹೆಂದಿ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡುತ್ತಿರುವಾಗ ಯುವತಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.
ಈ ಘಟನೆ ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ನಡೆದಿದೆ. ಮೃತ ಯುವತಿ ಶ್ರೇಯಾ ಜೈನ್(28) ಎಂದು ಗುರುತಿಸಲಾಗಿದೆ. ದೆಹಲಿ ಮೂಲದವರಾದ ಶ್ರೇಯಾ ಕುಟುಂಬ ಡೆಹ್ರಾಡೂನ್ನ ಐಷಾರಾಮಿ ರೆಸಾರ್ಟ್ ಒಂದರಲ್ಲಿ ಮದುವೆಯ ಸಂಭ್ರಮಾಚರಣೆಗಾಗಿ ಬುಕ್ ಮಾಡಿತ್ತು. ಹೀಗಾಗಿ ಮದುವೆಗೂ ಎರಡು ದಿನಗಳ ಹಿಂದೆ ರೆಸಾರ್ಟ್ಗೆ ತೆರಳಿದ್ದರು.
ಮದುವೆಯ ಹಿಂದಿನ ದಿನ ಅದ್ದೂರಿಯಾಗಿ ಮೆಹಂದಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ವಧು ಮೆಹಂದಿ ದಿನ ಡಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.