ಹರಿಯಾಣ, ಜೂ. 1೯(DaijiworldNews/AK): ಹರಿಯಾಣದ ಕಾಂಗ್ರೆಸ್ ಶಾಸಕಿ ಕಿರಣ್ ಚೌಧರಿ ತಮ್ಮ ಮಗಳು ಶೃತಿ ಚೌಧರಿ ಜತೆಗೆ ಇಂದು ಬಿಜೆಪಿಗೆ ಸೇರ್ಪಡೆಗೊಂಡರು. ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಸೆರ್ಪಡೆ ಕಾಂಗ್ರೆಸ್ ಪಕ್ಷಕ್ಕೆ ಅಘಾತವಾಗಿದೆ.
ಕಿರಣ್ ಮತ್ತು ಶ್ರುತಿ ಚೌಧರಿ ಮಂಗಳವಾರ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಳುಹಿಸಿರುವ ರಾಜೀನಾಮೆ ಪತ್ರದಲ್ಲಿ ಕಿರಣ್ ಬರೆದುಕೊಂಡಿದ್ದಾರೆ.
ಹರ್ಯಾಣದಲ್ಲಿ ಕಾಂಗ್ರೆಸ್ ವೈಯಕ್ತಿಕ ದಂಧೆ ನಡೆಸುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ. ಇದರಲ್ಲಿ ನನ್ನಂತಹ ಪ್ರಾಮಾಣಿಕ ಧ್ವನಿಗಳಿಗೆ ಅವಕಾಶವಿಲ್ಲ. ನನ್ನಂತಹವರನ್ನು ಬಹಳ ಯೋಜನಾ ಬದ್ಧವಾಗಿ ಹತ್ತಿಕ್ಕಲಾಗುತ್ತದೆ. ಕಾಲಕಾಲಕ್ಕೆ ಅಪಮಾನಗಳನ್ನು ಮಾಡಿ ಷಡ್ಯಂತ್ರಗಳನ್ನು ಹೆಣೆಯುತ್ತಾರೆ. ನನ್ನ ಜನರನ್ನು ಪ್ರತಿನಿಧಿಸುವ ಮತ್ತು ಮೌಲ್ಯಗಳನ್ನು ಎತ್ತಿಹಿಡಿಯುವ ನನ್ನ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿದೆ ಎಂದು ತಿಳಿಸಿದ್ದರೆ.
ಕಾಂಗ್ರೆಸ್ ಪಕ್ಷವು ದುರದೃಷ್ಟವಶಾತ್ ತನ್ನ ಸ್ವಾರ್ಥಕ್ಕಾಗಿ ಪಕ್ಷದ ಹಿತಾಸಕ್ತಿಗಳನ್ನು ರಾಜಿ ಮಾಡಿಕೊಂಡ ಒಬ್ಬ ವ್ಯಕ್ತಿಯ ಮೇಲೆ ಕೇಂದ್ರೀಕರಿಸಿದೆ ಎಂದು ಶೃತಿ ಚೌಧರಿ ರಾಜೀನಾಮೆಯಲ್ಲಿ ಹೇಳಿದ್ದಾರೆ.