ಲಕ್ನೋ, ಜೂ.22(DaijiworldNews/AK):ಅಯೋಧ್ಯೆ ರಾಮಮಂದಿರದ ರಾಮಲಲ್ಲಾನ ಪ್ರಾಣಪ್ರತಿಷ್ಠೆಯಲ್ಲಿ ಭಾಗಿಯಾಗಿದ್ದ ಅರ್ಚಕ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ನಿಧನರಾಗಿದ್ದಾರೆ.
ಕಾಶಿಯ ಪ್ರಧಾನ ಅರ್ಚಕರೂ ಆಗಿದ್ದ ದೀಕ್ಷಿತ್ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಕಾಶಿಯ ಪ್ರಖ್ಯಾತ ವೈದಿಕ ಶ್ರೌತ-ಸ್ಮಾರ್ತ ಸಂಸ್ಕಾರ ತಜ್ಞ, ಸಾಂಗ್ವೇದ ವಿದ್ಯಾಲಯದ ಯಜುರ್ವೇದ ಶಿಕ್ಷಕ ಲಕ್ಷ್ಮೀಕಾಂತ ದೀಕ್ಷಿತ್ ಅವರ ನಿಧನದಿಂದ ಸನಾತನಿ ಜಗತ್ತು ತುಂಬಲಾರದ ನಷ್ಟವನ್ನು ಅನುಭವಿಸಿದೆ.
ದೀಕ್ಷಿತ್ ಅವರ ನೇತೃತ್ವದಲ್ಲಿ ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರತಿಷ್ಠಾಪಿಸಲಾಯಿತು. ರಾಮಮಂದಿರದಲ್ಲಿ ಎಲ್ಲಾ ಪೂಜೆಗಳು ನೆರವೇರಿದ್ದವು. 2021ರ ಕಾಶಿ ವಿಶ್ವನಾಥ ಧಾಮದ ಉದ್ಘಾಟನೆಯ ಪೂಜೆಯಲ್ಲಿ ಅವರು ಪಾಲ್ಗೊಂಡಿದ್ದರು.
ಕಾಶಿಯ ವಿದ್ವಾಂಸರೂ, ಶ್ರೀರಾಮ ಜನ್ಮಭೂಮಿ ಪ್ರಾಣಪ್ರತಿಷ್ಠೆಯ ಪ್ರಧಾನ ಅರ್ಚಕರೂ ಆದ ವೇದಮೂರ್ತಿ ಅವರು, ಆಚಾರ್ಯ ಶ್ರೀ ಲಕ್ಷ್ಮೀಕಾಂತ ದೀಕ್ಷಿತ್ ಅವರ ನಿಧನ ಅಧ್ಯಾತ್ಮ ಮತ್ತು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಸಂಸ್ಕೃತ ಭಾಷೆ ಮತ್ತು ಭಾರತೀಯ ಸಂಸ್ಕೃತಿಗೆ ಅವರು ಮಾಡಿದ ಸೇವೆಗಾಗಿ ಅವರು ಯಾವಾಗಲೂ ಸ್ಮರಣೀಯರಾಗಿದ್ದಾರೆ ಎಂದು ಸ್ಮರಿಸಿದ್ದಾರೆ.