ನವದೆಹಲಿ, ಜೂ.24(DaijiworldNews/AK):ಪ್ರತಿಪಕ್ಷಗಳ ತೀವ್ರ ಆಕ್ಷೇಪದ ನಡುವೆಯೂ 18ನೇ ಲೋಕಸಭೆಯ ಮೊದಲ ಅಧಿವೇಶನಕ್ಕೆ ಮುನ್ನ ಬಿಜೆಪಿ ಸಂಸದ ಭರ್ತೃಹರಿ ಮಹತಾಬ್ ಸೋಮವಾರ ಲೋಕಸಭೆ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಹತಾಬ್ಗೆ ಪ್ರಮಾಣ ವಚನ ಬೋಧಿಸಿದರು.ಇಂದು ಆರಂಭವಾಗಲಿರುವ ಲೋಕಸಭೆ ಅಧಿವೇಶನದ ಅಧ್ಯಕ್ಷತೆ ವಹಿಸಲು ಮಹತಾಬ್ ಸಜ್ಜಾಗಿದ್ದು, ಹೊಸದಾಗಿ ಚುನಾಯಿತ ಸಂಸದರ ಪ್ರಮಾಣ ವಚನ ಸ್ವೀ ಕಾರ ಸಮಾರಂಭದ ಉಸ್ತುವಾರಿ ವಹಿಸಲಿದ್ದಾರೆ.
ಹಂಗಾಮಿ ಸ್ಪೀ ಕರ್ ಆಗಿ ಭರ್ತೃಹರಿ ಮಹತಾಬ್ ಆಯ್ಕೆಗೆ ಈಗಾಗಲೇ ವಿಪಕ್ಷಗಳಿಂದ ಆಕ್ರೋ ಶ ವ್ಯಕ್ತವಾಗಿದ್ದು ಇದರ ನಡುವೆ ಮಹತಾಬ್ ಅವರು ಹಂಗಾಮಿ ಸ್ಪೀ ಕರ್ ಆಗಿ ಪ್ರಮಾಣ ವಚನ ಸ್ವೀ ಕರಿಸಿದ್ದಾರೆ, ಇತ್ತ ಲೋಕಸಭಾ ಹಂಗಾಮಿ ಸ್ಪೀಕರ್ ಆಯ್ಕೆಯಾಗುತ್ತಿದ್ದಂತೆ ಸದನ ತೊರೆದ ವಿಪಕ್ಷ ನಾಯಕರು ಸ್ಪೀಕರ್ ಆಯ್ಕೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ದೆಹಲಿಯ ಗಾಂಧಿ ಪ್ರತಿಮೆ ಎದುರು ಸಂವಿಧಾನದ ಪ್ರತಿ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.