ನವದೆಹಲಿ, ಜೂ.24(DaijiworldNews/AK): ಚುನಾವಣೆ ಬಳಿಕ ಮೊದಲ ಲೋಕಸಭೆ ಅಧಿವೇಶನ ಆರಂಭವಾಗಿದೆ. ಕಲಾಪದ ಮೊದಲ ದಿನವೇ ಸಂವಿಧಾನ ಬಚಾವ್ ಘೋಷವಾಕ್ಯದೊಂದಿಗೆ ವಿರೋಧ ಪಕ್ಷಗಳು ಪ್ರತಿಭಟನೆಗೆ ಇಳಿದಿದ್ದಾರೆ.

ಕಲಾಪ ಆರಂಭಕ್ಕೂ ಮುನ್ನ ವಿಪಕ್ಷಗಳು ಹೊರಗಡೆ ಸಂವಿಧಾನದ ಪ್ರತಿ ಹಿಡಿದು ಘೋಷಣೆ ಕೂಗಿದ್ದಾರೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ಎಲ್ಲ ವಿಪಕ್ಷ ನಾಯಕರು ಇದರಲ್ಲಿ ಭಾಗಿಯಾಗಿದ್ದರು. ಪ್ರತಿಭಟನೆ ಬೆನ್ನಲೆ ಈ ಬಗ್ಗೆ ಟ್ವಿಟ್ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ನೀಟ್, ನೆಟ್ ಪರೀಕ್ಷೆಯಲ್ಲಿ ಅಕ್ರವಾಗಿದೆ, ಪಶ್ಚಿಮ ಬಂಗಾಳದಲ್ಲಿ ರೈಲು ದುರಂತವಾಗಿದೆ, ಕಳೆದ 13 ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿದೆ ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ, ಬೆಲೆ ಏರಿಕೆ ಎಕ್ಸಿಟ್ ಪೋಲ್ ಷೇರು ಮಾರುಕಟ್ಟೆ ಹಗರಣ ನಡೆದಿದೆ. ಈ ಬಗ್ಗೆ ಮೋದಿ ಅವರು ಮಾತನಾಡಬಹುದು ಎಂದು ದೇಶದ ಜನರು ನಿರೀಕ್ಷಿಸಿದ್ದರು. ನೈತಿನ, ರಾಜಕೀಯ ಸೋಲಿನ ನಂತರವೂ ಮೋದಿ ಅಹಂಕಾರ ಹಾಗೇ ಉಳಿದಿದೆ ಎಮದು ವಾಗ್ದಾಳಿ ನಡೆಸಿದರು.