ಒಡಿಶಾ, ಜೂ.25(DaijiworldNews/AK): ತರಬೇತಿ ಪಡೆದು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಷ್ಟಸಾಧ್ಯ. ಹೀಗಿರುವಾಗ ತರಬೇತಿ ಪಡೆಯದೇ ಕೇವಲ ನಾಲ್ಕು ತಿಂಗಳುಗಳ ಕಾಲ ಸ್ವ ಅಧ್ಯಯನ ಮಾಡಿ ಮೊದಲ ಪ್ರಯತ್ನದಲ್ಲೇ ಯುಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಿಮಿ ಕರಣ್ ಅವರ ಯಶೋಗಾಥೆ ಇದು.
ಸಿಮಿ ಕರಣ್ ಅವರು ಒಡಿಶಾ ಮೂಲದವರು. ಅವರು ಛತ್ತೀಸ್ಗಢದ ಭಿಲಾಯ್ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಮುಗಿಸುತ್ತಾರೆ. ಆಕೆಯ ತಂದೆ ಭಿಲಾಯ್ ಸ್ಟೀಲ್ ಪ್ಲಾಂಟ್ನಲ್ಲಿ ಕೆಲಸ ಮಾಡುತ್ತಿದ್ದರೆ. ತಾಯಿ ಶಿಕ್ಷಕಿಯಾಗಿದ್ದರು.
ನಂತರ, ಅವರು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮುಂದುವರಿಸಲು ಐಐಟಿ ಬಾಂಬೆಯಲ್ಲಿ ಅಧ್ಯಯನ ಮಾಡಿದರು. ಕಾಲೇಜು ದಿನಗಳಲ್ಲಿ ಕೊಳೆಗೇರಿಗಳಲ್ಲಿನ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಅಲ್ಲಿನ ಜನರ ಪರಿಸ್ಥಿತಿಯನ್ನು ಕಣ್ಣಾರೆ ಕಂಡ ಬಳಿಕ ಸಮಾಜಕ್ಕಾಗಿ ದುಡಿಯಬೇಕು ಎಂಬ ಮನಸ್ಸಾಗುತ್ತದೆ, ಆ ಬಳಿಕ ಸಿಮಿ ಕರಣ್ ಅವರು ಯುಪಿಎಸ್ಸಿ ಪರೀಕ್ಷೆ ಬರೆಯಲು ಮನಸ್ಸು ಮಾಡುತ್ತಾರೆ.
ಬಳಿಕ ಸಿಮಿ ಅವರು ಉನ್ನತ ಯುಪಿಎಸ್ಸಿ ಅಭ್ಯರ್ಥಿಗಳ ಸಂದರ್ಶನಗಳನ್ನು ವಿಶ್ಲೇಷಿಸುವ ಮೂಲಕ ಸಿದ್ಧತೆಗಳನ್ನು ಪ್ರಾರಂಭಿಸಿದರು. ಕೇವಲ 4 ತಿಂಗಳ ತಯಾರಿಯೊಂದಿಗೆ 2019 ರಲ್ಲಿ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿಯಲ್ಲಿ 31 ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ 22ನೇ ವಯಸ್ಸಿಗೆ ಐಎಎಸ್ ಅಧಿಕಾರಿಯಾಗುತ್ತಾರೆ.