ಹಿಮಾಚಲ ಪ್ರದೇಶ, ಜೂ.26(DaijiworldNews/AA): ಯುಪಿಎಸ್ಸಿ ಬರೆಯುವ ಕೆಲ ಅಭ್ಯರ್ಥಿಗಳು ಮಾತ್ರ ಒಂದೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಆದರೆ ಕೆಲ ಅಭ್ಯರ್ಥಿಗಳು ಮಾತ್ರ ಹಲವಾರು ಪ್ರಯತ್ನಗಳ ಬಳಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಹೀಗೆ ತಮ್ಮ ಐದನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೋಹಿತಾ ಶರ್ಮಾ ಅವರ ಯಶೋಗಾಥೆ ಇದು.
ಮೋಹಿತಾ ಶರ್ಮಾ ಅವರು ಹಿಮಾಚಲ ಪ್ರದೇಶದ ಕಾಂಗ್ರಾದವರು. ಆಕೆಯ ತಂದೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಗೃಹಿಣಿ.
ಆರ್ಥಿಕವಾಗಿ ಹಲವಾರು ಅಡಚಣೆಗಳನ್ನು ಹೊಂದಿದ್ದ ಮೋಹಿತಾ ಶರ್ಮಾ ಅವರು ದ್ವಾರಕದ ದೆಹಲಿ ಪಬ್ಲಿಕ್ ಸ್ಕೂಲ್ನಲ್ಲಿ ಶಿಕ್ಷಣ ಪಡೆದರು. ನಂತರ ನವದೆಹಲಿಯ ಭಾರತಿ ವಿದ್ಯಾಪೀಠ ಕಾಲೇಜ್ ಆಫ್ ಇಂಜಿನಿಯರಿಂಗ್ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು.
ನಂತರ ಮೋಹಿತಾ ಶರ್ಮಾ ಪರೀಕ್ಷೆಯಲ್ಲಿ ತೇರ್ಗಡೆಯಾದರು ಮತ್ತು 2016 ರಲ್ಲಿ ಸಹಾಯಕ ವಿಭಾಗ ಅಧಿಕಾರಿಯಾಗಿ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸೇರಿದರು. ಕೆಲಸ ಮಾಡುವಾಗ, ಅವರು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. ಐಪಿಎಸ್ ಅಧಿಕಾರಿಯಾಗಬೇಕೆಂಬುದು ಆಕೆಯ ಆಸೆಯಾಗಿತ್ತು. 2016 ರಲ್ಲಿ ಐದನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 262 ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ನಂತರ ಅವರು 2017 ರಲ್ಲಿ ಐಎಫ್ಎಸ್ ಗೆ ಆಯ್ಕೆಯಾಗುತ್ತಾರೆ.
ಮೋಹಿತಾ ಶರ್ಮಾ ಅವರು 2019 ರಲ್ಲಿ ಐಎಫ್ಎಸ್ ಅಧಿಕಾರಿ ರುಶಾಲ್ ಗಾರ್ಗ್ ಅವರನ್ನು ವಿವಾಹವಾಗುತ್ತಾರೆ. ತಮ್ಮ ಸತತ ಪ್ರಯತ್ನಗಳ ಮೂಲಕ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೋಹಿತಾ ಶರ್ಮಾ ಅವರು ಹಲವಾರು ಯುಪಿಎಸ್ಸಿ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.