ಗುಜರಾತ್ , ಜೂ 27 (DaijiworldNews/ AK): ಸೇನಾಧಿಕಾರಿಯ ಮಗಳಾದ ಅಂಬಿಕಾ ರೈನಾ ಸ್ವಿಟ್ಜರ್ಲೆಂಡ್ ನಲ್ಲಿನ ಉದ್ಯೋಗ ಬಿಟ್ಟು ಯುಪಿಎಸ್ ಸಿ ಪರೀಕ್ಷೆ ಬರೆದು ಯಶಸ್ವಿಯಾಗಿದ್ದಾರೆ. ಅವರ ಯಶಸ್ಸಿನ ಹಾದಿಯ ಬಗ್ಗೆ ತಿಳಿಯೋಣ ಬನ್ನಿ.
ಅಂಬಿಕಾ ರೈನಾ ಹುಟ್ಟಿದ್ದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ. ಅವರ ತಂದೆ ಸೇನೆಯಲ್ಲಿ ಮೇಜರ್ ಜನರಲ್. ತಂದೆಯ ಕೆಲಸದ ವರ್ಗಾವಣೆಯ ಕಾರಣದಿಂದಾಗಿ, ಅವರು ದೇಶದ ವಿವಿಧ ರಾಜ್ಯಗಳಲ್ಲಿ ವಾಸಿಸುವ ಮೂಲಕ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.
ಅಂಬಿಕಾ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದರು. ಅಂಬಿಕಾ ರೈನಾ ಗುಜರಾತ್ ನ ಅಹಮದಾಬಾದ್ ನಲ್ಲಿರುವ ಸಿಇಪಿಟಿ ವಿಶ್ವವಿದ್ಯಾಲಯದಿಂದ ಆರ್ಕಿಟೆಕ್ಟ್ನಲ್ಲಿ ಪದವಿ ಪಡೆದಿದ್ದಾರೆ.
2020 ರಲ್ಲಿ ತನ್ನ ಪದವಿಯನ್ನು ಪೂರ್ಣಗೊಳಿಸುವ ಮೊದಲೇ, ಅವರು ಸ್ವಿಟ್ಜರ್ಲೆಂಡ್ ನ ಜ್ಯೂರಿಚ್ ಮೂಲದ ಕಂಪನಿಯಲ್ಲಿ ಇಂಟರ್ನ್ಶಿಪ್ ಮಾಡಲು ಅವಕಾಶವನ್ನು ಪಡೆದರು. ಇದು ಅವರಿಗೆ ದೊಡ್ಡ ಅವಕಾಶವಾಗಿತ್ತು.
ಸ್ವಿಟ್ಜರ್ಲೆಂಡ್ ನ ಕೆಲವು ಕಂಪನಿಗಳಲ್ಲಿ ಪದವಿ ಮುಗಿದ ನಂತರ ಉದ್ಯೋಗದ ಆಫರ್ ಕೂಡ ಬಂದಿತ್ತು. ಆದರೆ ಅಲ್ಲಿ ನೆಲೆಸಿರುವಾಗಲೇ ದೇಶಕ್ಕಾಗಿ ಏನಾದರೂ ಮಾಡಬೇಕು ಎಂದು ಅಂಬಿಕಾ ಸಂಕಲ್ಪ ಮಾಡಿದರು.
ಅಂಬಿಕಾ ರೈನಾ ವಿದೇಶವನ್ನು ತೊರೆದು ಭಾರತಕ್ಕೆ ಬಂದು ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುವುದು ಸುಲಭದ ನಿರ್ಧಾರವಾಗಿರಲಿಲ್ಲ.ಆದರೆ ಅಂಬಿಕಾ ತನ್ನ ಗುರಿಯ ಬಗ್ಗೆ ಸ್ಪಷ್ಟತೆ ಹೊಂದಿದ್ದರು. ಕೊನೆಗೆ 2022 ರಲ್ಲಿ UPSC ಪರೀಕ್ಷೆಯ ಮೂರನೇ ಪ್ರಯತ್ನದಲ್ಲಿ 164 ನೇ ಶ್ರೇಣಿಯೊಂದಿಗೆ ಯಶಸ್ವಿಯಾಗಿದ್ದಾರೆ.
ಮೊದಲೆರಡು ಯತ್ನಗಳಲ್ಲಿ ವಿಫಲವಾದ ನಂತರವೂ ಅವರು ಛಲ ಬಿಡಲಿಲ್ಲ. ಪ್ರತಿ ಬಾರಿ ತಮ್ಮ ತಂತ್ರವನ್ನು ಬದಲಾಯಿಸಿ ಪರೀಕ್ಷೆಯನ್ನು ಎದುರಿಸಿ ಯಶಸ್ಸು ಕಂಡರು.