ಮುಂಬೈ, ಜೂ 27 (DaijiworldNews/ AK): ಮಹಾರಾಷ್ಟ್ರಸರ್ಕಾರ ಬಜೆಟ್ನಲ್ಲಿ ಮುಂಬೈ ಭಾಗದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ತೆರಿಗೆಯನ್ನು ಇಳಿಸಿದೆ.
ಡೀಸೆಲ್ ಮೇಲಿದ್ದ 24% ತೆರಿಗೆಯನ್ನು 21% ಇಳಿಕೆ ಮಾಡಿದ್ದು ಪ್ರತಿ ಲೀಟರ್ ಡೀಸೆಲ್ ಬೆಲೆ 2 ರೂ. ಇಳಿಕೆಯಾಗಲಿದೆ. ಪೆಟ್ರೋಲ್ ಮೇಲಿದ್ದ 26% ತೆರಿಗೆಯನ್ನು 25% ಇಳಿಕೆ ಮಾಡಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 65 ಪೈಸೆ ಇಳಿಕೆಯಾಗಿದೆ.
ಜೂನ್ 28 ರಂದು ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.21 ರೂ. ಇದ್ದರೆ ಡೀಸೆಲ್ ಬೆಲೆ 92.15 ರೂ. ಇದೆ.