ಬೆಂಗಳೂರು, ಜೂ 28 (DaijiworldNews/AK):ಪ್ರಜ್ವಲ್ ಮತ್ತು ಸೂರಜ್ ಬಂಧನ ಬಗ್ಗೆ ಈಗ ನಾನೇನು ಮಾತನಾಡಲ್ಲ. ಕಾಲವೇ ಎಲ್ಲವನ್ನು ನಿರ್ಧಾರ ಮಾಡುತ್ತದೆ ಎಂದು ಮಾಜಿ ಸಚಿವ ರೇವಣ್ಣ ತಿಳಿಸಿದ್ದಾರೆ.
ಇಬ್ಬರು ಪುತ್ರರ ಬಂಧನ ಷಡ್ಯಂತ್ರವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಜ್ವಲ್, ಸೂರಜ್ ಬಂಧನದ ವಿಚಾರ ನಾನು ಅದರ ಬಗ್ಗೆ ಈಗ ಏನು ಹೇಳುವುದಿಲ್ಲ. ಯಾರೇ ತಪ್ಪು ಮಾಡಿದ್ರು ಕಾನೂನು ಇದೆ. ನಾನು ಯಾರನ್ನು ವಹಿಸಿಕೊಳ್ಳಲು ಹೋಗುವುದಿಲ್ಲ. ಕಾನೂನು ಬಗ್ಗೆ ನನಗೆ ಗೌರವ ಇದೆ. ನ್ಯಾಯಾಂಗದ ಮೇಲೆ ಗೌರವ ಇದೆ. ದೇವರ ಬಗ್ಗೆ ನನಗೆ ನಂಬಿಕೆ ಇದೆ ಎಂದರು.
ಇನ್ನು ಪೆನ್ ಡ್ರೈವ್ ಲೀಕ್ ನಲ್ಲಿ ಮಾಜಿ ಶಾಸಕ ಪ್ರೀತಂಗೌಡಗೆ ನೊಟೀಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರೆಲ್ಲ ದೊಡ್ಡವರು ಇದ್ದಾರೆ. ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ಕೋರ್ಟ್ನಲ್ಲಿ ವಿಷಯ ಇರುವಾಗ ಮಾತನಾಡುವುದು ಸರಿಯಲ್ಲ. ನ್ಯಾಯಾಂಗದ ಬಗ್ಗೆ ಗೌರವ ಇದೆ. ನ್ಯಾಯಾಂಗ ಏನ್ ತೀರ್ಪು ನೀಡುತ್ತದೋ ಅದಕ್ಕೆ ಬದ್ದವಾಗಿ ಇರುತ್ತೇನೆ ಎಂದು ಹೇಳಿದರು.