ಜಮ್ಮು, ಜೂ.30(DaijiworldNews/AA): ಅಮರನಾಥ ಮಂದಿರಕ್ಕೆ ಜಮ್ಮುವಿನ ಭಾಗವತಿ ನಗರದ ಮೂಲ ಶಿಬಿರದಿಂದ ಯಾತ್ರಿಗಳ ೩ನೇ ತಂಡವು ಭದ್ರತೆಯೊಂದಿಗೆ ಇಂದು ಮುಂಜಾನೆ ಪ್ರಯಾಣ ಬೆಳೆಸಿದೆ.
ಎರಡು ಪ್ರತ್ಯೇಕ ಬೆಂಗಾವಲು ಪಡೆಗಳ ಭದ್ರತೆಯೊಂದಿಗೆ 6,619 ಯಾತ್ರಿಕರು ಅಮರನಾಥ ಮಂದಿರಕ್ಕೆ ಪ್ರಯಾಣ ಬೆಳೆಸಿದೆ. ಯಾತ್ರೆಗೆ ಹೊರಟವರ ಪೈಕಿ 1,141 ಮಹಿಳೆಯರೂ ಸೇರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯಾತ್ರೆಯ ಮೊದಲ ದಿನವಾದ ಶನಿವಾರ ಹಿಮಾಲಯದ ಶ್ರೇಣಿಯಲ್ಲಿರುವ ಪವಿತ್ರ ಅಮರನಾಥ ಗುಹೆಗೆ ಇಲ್ಲಿನ ಭಾಗವತಿ ನಗರದ ಮೂಲ ಶಿಬಿರದಿಂದ ಸುಮಾರು ೧೪ ಸಾವಿರ ಯಾತ್ರಾರ್ಥಿಗಳು ಪ್ರಯಾಣ ಬೆಳೆಸಿದ್ದರು. 52 ದಿನಗಳ ಪರ್ಯಂತದ ಅಮರನಾಥ ವಾರ್ಷಿಕ ಯಾತ್ರೆಯು ಆಗಸ್ಟ್ 19ರಂದು ಕೊನೆಗೊಳ್ಳಲಿದೆ. ಕಳೆದ ವರ್ಷ 4.5 ಲಕ್ಷಕ್ಕೂ ಹೆಚ್ಚು ಯಾತ್ರಿಗಳು ಹಿಮಲಿಂಗ ದರ್ಶನ ಪಡೆದಿದ್ದರು.