ಮುಂಬೈ, ಜು.02(DaijiworldNews/AK): ಹಿಜಾಬ್ ನಿಷೇಧದ ನಂತರ ಮುಂಬೈ ನ ಎನ್. ಜಿ.ಆಚಾರ್ಯ ಮತ್ತು ಡಿ. ಕೆ. ಮರಾಠೆ ಕಾಲೇಜು ಇದೀಗ ಮತ್ತೊಂದು ವಸ್ತ್ರ ಸಂಹಿತೆಯನ್ನು ಜಾರಿಗೆ ತಂದಿದೆ.
ಕಾಲೇ ಜು ಆವರಣದಲ್ಲಿ ಹರಿದ ಜೀನ್ಸ್, ಟಿ ಶರ್ಟ್ , ಜೆರ್ಸಿ ಧರಿಸುವುದನ್ನು ನಿಷೇಧಿಸಿ ನೋಟಿಸ್ ಹೊರಡಿಸಿದೆ. ಜೂನ್ 4ರಹೊಸ ಶೈಕ್ಷಣಿಕ ವರ್ಷ ದಿಂದ ವಸ್ತ್ರ ಸಂಹಿತೆ ಜಾರಿಗೆ ತರಲು ನಿರ್ಧರಿಸಿದ್ದ ಕಾಲೇಜು ಆಡಳಿತ ಮಂಡಳಿ, ಧರ್ಮ ವನ್ನು ಪ್ರತಿನಿಧಿಸುವ ಹಿಜಾಬ್, ನಖಾಬ್, ಬುರ್ಖಾ ನಿಷೇ ಧಿಸಿತ್ತು. ಕಾಲೇ ಜಿನ ಕ್ರಮದ ವಿರುದ್ಧ ಕೆಲ ವಿದ್ಯಾರ್ಥಿಗಳು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು.
ಈ ವಿಚಾರದಲ್ಲಿ ಮಧ್ಯಪ್ರವೇ ಶಿಸಲು ನಿರಾಕರಿಸಿದ್ದ ಬಾಂಬೆ ಹೈಕೋ ರ್ಟ್ ಜೂನ್ 26ರಂದು ಅರ್ಜಿ ಗಳನ್ನು ವಜಾಗೊಳಿಸಿತ್ತು. ಇದಾದ ಬೆನ್ನಲ್ಲೇ ಜೂನ್ 27ರಂದು ಹರಿದ ಜೀ ನ್ಸ್, ಟಿ–ಶರ್ಟ್ ಧರಿಸುವುದನ್ನು ನಿಷೇಧಿಸಿ ಕಾಲೇಜು ಆಡಳಿತ ಮಂಡಳಿ ನೋಟಿಸ್ ಹೊರಡಿಸಿದೆ.
ಕಾಲೇಜಿನ ಕ್ಯಾಂಪಸ್ನಲ್ಲಿ ಹರಿದ ಜೀನ್ಸ್, ಟಿ-ಶರ್ಟ್ , ಅಸಭ್ಯ ಉಡುಪುಗಳು, ಜರ್ಸಿ ಧರಿಸಲು ಅವಕಾಶವಿಲ್ಲ. ವಿದ್ಯಾರ್ಥಿಗಳು ಅರ್ಧ ಅಥವಾ ಪೂರ್ಣ ಕೈ ಶರ್ಟ್ ಮತ್ತು ಪ್ಯಾಂ ಟ್ ಧರಿಸಬಹುದು. ವಿದ್ಯಾರ್ಥಿನಿಯರು ಭಾರತೀ ಯ ಅಥವಾ ಪಾಶ್ಚಿಮಾತ್ಯ ಉಡುಗೆಗಳನ್ನು ಧರಿಸಬಹುದು ಎಂದು ನೋಟಿಸ್ನಲ್ಲಿ ತಿಳಿಸಿದೆ.