ಪುಣೆ, ಜು.02(DaijiworldNews/AK): ಕಿಡ್ನ್ಯಾಪ್ ಮತ್ತು ಕುಟುಂಬದ ಚಾಲಕನನ್ನು ಅಕ್ರಮವಾಗಿ ಬಂಧಿಸಿದ ಪ್ರಕರಣದಲ್ಲಿ ಪುಣೆ ಪೋರ್ಷೆ ಕಾರು ಅಪಘಾತದ ಆರೋಪಿ ಅಪ್ರಾಪ್ತನ ತಂದೆ ಮತ್ತು ಅಜ್ಜನಿಗೆ ಮಂಗಳವಾರ ಪುಣೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಜಾಮೀನು ಆದೇಶವನ್ನು ಕೋರ್ಟ್ ನೀಡಿದ ನಂತರ ಬಾಲಾಪರಾಧಿಯ ಅಜ್ಜ ಎಸ್ಕೆ ಅಗರ್ವಾಲ್ ಬಿಡುಗಡೆಯಾಗಲಿದ್ದಾರೆ. ಬ್ಲಡ್ ಎಕ್ಸ್ ಚೇಂಜ್ ಪ್ರಕರಣದಲ್ಲಿ ಪೊಲೀಸರು ತಮ್ಮ ದಾಖಲೆಗಳನ್ನು ಸಲ್ಲಿಸಬೇಕಾಗಿರುವುದರಿಂದ ಅಪ್ರಾಪ್ತ ಆರೋಪಿಯ ತಂದೆ ವಿಶಾಲ್ ಅಗರ್ವಾಲ್ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ.
ಮೇ 19 ರ ಮಧ್ಯರಾತ್ರಿ ಅಪಘಾತದ ನಂತರ ಸುರೇಂದ್ರ ಕುಮಾರ್ ಅಗರ್ವಾಲ್, ಚಾಲಕನನ್ನು ಅಪಹರಿಸಿ ತನ್ನ ಬಂಗಲೆಗೆ ಕರೆದೊಯ್ದಿದ್ದಾನೆ. ಬಳಿಕ ಆ ದಿನ ರಾತ್ರಿ ಚಾಲಕ ಕಲ್ಯಾಣಿನಗರದಲ್ಲಿರುವ ಅಗರ್ವಾಲ್ ಮನೆಯಲ್ಲಿ ತಂಗಿದ್ದನು. ಆತನ ಹೆಂಡತಿ ಮತ್ತು ಮಕ್ಕಳನ್ನು ಸಹ ಇಲ್ಲಿಗೆ ಕರೆತರಲಾಗಿದೆ ಎಂದು ಪುಣೆ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.