ಬೆಂಗಳೂರು, ಜು.03(DaijiworldNews/AA): ಕಾಂಗ್ರೆಸ್ ನವರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ಕೆಫೆ ಬ್ಲಾಸ್ಟ್ ಮಾಡುವರನ್ನ ಹಿಡಿಯೋಕೆ ಪೊಲೀಸರನ್ನ ಬಿಟ್ಟಿಲ್ಲ. ಆದರೆ ನಮ್ಮನ್ನ ಹಿಡಿಯೋದಕ್ಕೆ ನೂರಾರು ಪೊಲೀಸರನ್ನ ಬಿಟ್ಟಿದ್ದಾರೆ. ಇದರ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಸರ್ಕಾರ ಬಂದು ಒಂದು ವರ್ಷ ಆಗಿದೆ. ಲೂಟಿ ಹೊಡೆಯೋಕೆ ಸರ್ಕಾರ ಸಿದ್ದತೆ ಮಾಡ್ತಿದೆ. ಒಂದಾದ ಮೇಲೊಂದು ಹಗರಣ ನಡೀತಿದೆ. ತೆಲಂಗಾಣ ಹಾಗೂ ಹೈದ್ರಾಬಾದ್ ಲೂಟಿ ಹಣ ಹೋಗಿದೆ. ನಾವು ಹೋರಾಟ ಮಾಡಿದ್ದಕ್ಕೆ ಸಚಿವರು ರಾಜೀನಾಮೆ ಕೊಟ್ಟಿದ್ರು. ರಾಜ ಭವನಕ್ಕೆ ಹೋದ್ಮೇಲೆ ಸಚಿವರು ರಾಜೀನಾಮೆ ನೀಡಿದ್ರು. ನಮ್ಮ ಹೋರಾಟವನ್ನ ಹತ್ತಿಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಲ್ಮೀಕಿ ಬೆನ್ನಲ್ಲೇ ಮುಡಾದಲ್ಲೂ ಹಗರಣ ನಡೆದಿದೆ. ಬದಲಿ ನಿವೇಶನದ ಗೋಲ್ಮಾಲ್ ಆಗಿದೆ. ಕಟಾ ಕಟಾ ಅಂತ ಹಗರಣ ನಡೆದಿದೆ. 80 ಸಾವಿರ ಜನ ಅರ್ಜಿ ಹಾಕಿದವರಿಗೆ ಸೈಟ್ ಇಲ್ಲ. ಬಡವರಿಗೆ ಹಂಚಿಕೆಯಾಗಿರೋ ಸೈಟ್ ದೋಚಿದ್ದಾರೆ. ದೀಪದ ಕೆಳಗೆ ಲೂಟಿ ಮಾಡುತ್ತಿದ್ದಾರೆ. ಸುರ್ಜೇವಾಲ ಬೆಂಗಳೂರಿಗೆ ಬಂದು ಹೋಗಿದ್ರು. ಇಲ್ಲಿನ ಲೂಟಿ ಮಾಡೆಲ್ ದೇಶಕ್ಕೆ ಹಂಚುತ್ತಿದ್ದಾರೆ. ಯಾರ್ಯಾರಿಗೆ ಸೈಟ್ ಅಲಾಟ್ ಆಗಿದೆ, ಅದನ್ನ ರದ್ದು ಮಾಡಬೇಕು. ವಿಧಾನಸಭೆ ಹಾಗೂ ಪರಿಷತ್ ನಲ್ಲೂ ನಾಮ್ಮ ಹೋರಾಟ ಮಾಡುತ್ತೇವೆ. ಸರ್ಕಾರದ ಭ್ರಷ್ಟಾಚಾರ ಜನರ ಮುಂದೆ ಇಡುತ್ತೇವೆ ಎಂದು ತಿಳಿಸಿದ್ದಾರೆ.