ಹುಬ್ಬಳ್ಳಿ, ಜು.07(DaijiworldNews/AK): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ
ಪ್ರಹ್ಲಾದ ಜೋಶಿ ಟೀಕಿಸಿದ್ದಾರೆ.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ ಎಂದು ಸಿಎಂ ಆರೋಪಿಸಿದ್ದರು. ಅಕ್ಕಿ ಸಂಗ್ರಹ ಕಡಿಮೆ ಆಗಬಹುದೆಂದು ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಆತಂಕವಿತ್ತು. ಹಾಗಾಗಿ ಕೊಟ್ಟಿರಲಿಲ್ಲ.
2024ರ ಜೂನ್ 13ರಂದ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ನಿಲ್ಲಿಸಿದ್ದೆವು. ಕೇಂದ್ರ ಸರ್ಕಾರ ಕೊಟ್ಟರೆ ಕೊಡುತ್ತೀವಿ ಎನ್ನಬೇಕಿತ್ತು. ಈಗ ಸ್ಟಾಕ್ ಇದೆ. 330ಲಕ್ಷ ಮೆಟ್ರಿಕ್ ಟನ್ ಸಂಗ್ರಹವಿದೆ. ಈಗ ಸಿದ್ದರಾಮಯ್ಯ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಎಲ್ಲ ದರಗಳು ಏರಿಕೆಯಾಗಿವೆ. ಹಾಲು ಹೆಚ್ಚಿಗೆ ಇದೆಯೆಂದು ದರ ಏರಿಸಿ ಮೋಸ ಮಾಡಿದ್ದೀ ರಿ ಎಂದು ವಾಗ್ದಾಳಿ ನಡೆಸಿದರು. ಭಾರತ ರೈಸ್, ಹಿಟ್ಟು ಬಂದ್ ಆಗಿದೆ ಎಂದು ಆರೋಪಿಸುತ್ತಿದ್ದಾರೆ. ಈಗಲೂ ಮಾರುಕಟ್ಟೆಯಲ್ಲಿದೆ. ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಬೇಕು. ಶಿವಮೊಗ್ಗದಲ್ಲಿ ಬಸ್ಗೆ ಡೀಸೆಲ್ ಇಲ್ಲದೆ ರಸ್ತೆಯಲ್ಲೇ ನಿಂತಿದೆ. ಇದು ದರಿದ್ರ ಸರ್ಕಾರ ಆಗಿದೆ ಎಂದರು.