ಲಕ್ನೋ, ಜು. 09(DaijiworldNews/AK): ಉತ್ತರ ಪ್ರದೇಶದಲ್ಲಿ ‘ಸತ್ಸಂಗ’ದಲ್ಲಿ ಕಾಲ್ತುಳಿತಕ್ಕೆ 121 ಜೀವಗಳು ಬಲಿಯಾಗಿದ್ದಕ್ಕೆ ಪ್ರಮುಖ ಕಾರಣಗಳ ವಿವರವನ್ನು ಉಲ್ಲೇಖಿಸಿದ ವರದಿಯನ್ನು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಎಸ್ಐಟಿ ತನ್ನ ವರದಿ ಸಲ್ಲಿಸಿದೆ.
ಸತ್ಸಂಗದಲ್ಲಿ ಕಾಲ್ತುಳಿತಕ್ಕೆ ಜನದಟ್ಟಣೆ ಮುಖ್ಯ ಕಾರಣ ಎಂದು ವಿಶೇಷ ತನಿಖಾ ತಂಡ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.ಸತ್ಸಂಗ’ ಆಯೋಜಿಸುವ ಸಮಿತಿಯು ಅನುಮತಿಸಿದ ಸಂಖ್ಯೆಗಿಂತ ಹೆಚ್ಚು ಜನರನ್ನು ಕರೆಸಿರುವುದು, ಅಸಮರ್ಪಕ ವ್ಯವಸ್ಥೆ ಮಾಡದಿರುವುದು ಹಾಗೂ ಸ್ಥಳ ಪರಿಶೀಲನೆ ನಡೆಸದಿರುವುದು ಘಟನೆಗೆ ಹೊಣೆಗಾರಿಕೆಯಾಗಿದೆ ಎಂದು ವರದಿ ಸ್ಪಷ್ಟಪಡಿಸಿದೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅನುಪಮ್ ಕುಲಶ್ರೇಷ್ಠ ಮತ್ತು ಅಲಿಗಢ ವಿಭಾಗೀಯ ಆಯುಕ್ತ ಚೈತ್ರಾ ವಿ ಅವರು ಸಿದ್ಧಪಡಿಸಿದ ವರದಿಯಲ್ಲಿ 128 ಸಾಕ್ಷಿಗಳ ಹೇಳಿಕೆಗಳಿವೆ. ಇದರಲ್ಲಿ ‘ಭೋಲೆ ಬಾಬಾ’ ಎಂದು ಕರೆಯಲ್ಪಡುವ ನಾರಾಯಣ ಸಕರ್ ಹರಿ ಅವರ ಸತ್ಸಂಗದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಸೇರಿದಂತೆ 128 ಸಾಕ್ಷಿಗಳಿವೆ. ರಾಜ್ಯ ಗೃಹ ಇಲಾಖೆಗೆ ವರದಿ ಸಲ್ಲಿಕೆಯಾಗಿದ್ದು, ಇಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.